ರಣಜಿ ಟ್ರೋಫಿ | ಬಂಗಾಳವನ್ನು ಮಣಿಸಿ ಮೊದಲ ಬಾರಿ ಫೈನಲ್ ಗೇರಿದ ಜಮ್ಮು–ಕಾಶ್ಮೀರ

Screengrab: X/@BCCIdomestic
ಕೊಲ್ಕತ್ತಾ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಜಮ್ಮು–ಕಾಶ್ಮೀರ ತಂಡ ಇತಿಹಾಸ ನಿರ್ಮಿಸಿದೆ. ಬಲಿಷ್ಠ ಬಂಗಾಳ ತಂಡವನ್ನು ಸೆಮಿಫೈನಲ್ ನಲ್ಲಿ ಸೋಲಿಸಿ ಮೊದಲ ಬಾರಿಗೆ ಫೈನಲ್ ಗೆ ಅರ್ಹತೆ ಪಡೆಯುವ ಮೂಲಕ ಜಮ್ಮು ಕಾಶ್ಮೀರ ತಂಡ ಗಮನ ಸೆಳೆದಿದೆ. ಬಂಗಾಳ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲೇ ಈ ಸಾಧನೆ ಮಾಡಿರುವುದು ವಿಶೇಷ.
ಮೊದಲ ಇನ್ನಿಂಗ್ಸ್ ನಲ್ಲಿ ಬಂಗಾಳವು 328 ರನ್ ಕಲೆಹಾಕಿತು. ಸುದೀಪ್ ಕುಮಾರ್ ಘರಾಮಿ 146 ರನ್ಗಳೊಂದಿಗೆ ತಂಡಕ್ಕೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇದಕ್ಕೆ ಉತ್ತರವಾಗಿ ಜಮ್ಮು–ಕಾಶ್ಮೀರ 302 ರನ್ ಗಳಿಗೆ ಆಲೌಟ್ ಆಯಿತು. ಬಂಗಾಳದ ವೇಗಿ ಮುಹಮ್ಮದ್ ಶಮಿ 8ಕ್ಕೆ 90 ರನ್ ನೀಡಿ ಗಮನಾರ್ಹ ಬೌಲಿಂಗ್ ಪ್ರದರ್ಶನ ನೀಡಿದರು.
ಎರಡನೇ ಇನ್ನಿಂಗ್ಸ್ ನಲ್ಲಿ ಪಂದ್ಯ ತಿರುವು ಪಡೆದಿತು. ಜಮ್ಮು–ಕಾಶ್ಮೀರದ ವೇಗಿಗಳ ದಾಳಿಗೆ ಬಂಗಾಳ ಕೇವಲ 99 ರನ್ ಗಳಿಗೆ ಕುಸಿಯಿತು. ಔಕಿಬ್ ನಬಿ 4ಕ್ಕೆ 36 ಹಾಗೂ ಸುನಿಲ್ ಕುಮಾರ್ 4ಕ್ಕೆ 27 ಬೌಲಿಂಗ್ ಪ್ರದರ್ಶನ ನೀಡಿದರು. ಇದರಿಂದ ಜಮ್ಮು ಕಾಶ್ಮೀರಕ್ಕೆ ಗೆಲುವಿಗೆ 126 ರನ್ ಗುರಿ ಲಭಿಸಿತು.
ಗುರಿ ಬೆನ್ನಟ್ಟಿದ ಜಮ್ಮು–ಕಾಶ್ಮೀರ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕವು ರಕ್ಷಣಾತ್ಮಕ ಆಟವಾಡಿತು. ವಂಶಜ್ ಶರ್ಮಾ ಅಜೇಯ 43 ರನ್ ಗಳಿಸಿದರು. ಶುಭಮ್ ಪುಂಡಿರ್ 27 ರನ್ ನೆರವಿನಿಂದ ಜಮ್ಮುಕಾಶ್ಮೀರ ಇನ್ನೂ ಆರು ವಿಕೆಟ್ಗಳು ಬಾಕಿ ಇರುವಾಗ ಗುರಿ ತಲುಪಿ ಮೊದಲ ಬಾರಿಗೆ ಫೈನಲ್ ತಲುಪಿತು.
𝙎𝘾𝙀𝙉𝙀𝙎 𝙊𝙁 𝙋𝙐𝙍𝙀 𝙅𝙐𝘽𝙄𝙇𝘼𝙏𝙄𝙊𝙉 🤩
— BCCI Domestic (@BCCIdomestic) February 18, 2026
J&K create history as they defeat Bengal by 7️⃣ wickets to book their ticket to the #RanjiTrophy Final for the very first time 🫡
Scorecard ▶️ https://t.co/QXyCuRHJ6e@IDFCFIRSTBank pic.twitter.com/VBKPD9I9mX






