ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿ : ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಹೊರಕ್ಕೆ

ಜನ್ನಿಕ್ ಸಿನ್ನರ್ | Photo Credit : X
ಶಾಂಘೈ, ಅ.6: ನೆದರ್ಲ್ಯಾಂಡ್ಸ್ನ ತಲ್ಲೋನ್ಗ್ರೀಕ್ಸ್ಪೂರ್ ವಿರುದ್ಧ ತನ್ನ 3ನೇ ಸುತ್ತಿನ ಪಂದ್ಯದ ವೇಳೆ ಕಾಲುನೋವಿಗೆ ಒಳಗಾಗಿರುವ ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ವಿಶ್ವದ ನಂ.4ನೇ ಆಟಗಾರ ಸಿನ್ನರ್ಗೆ 3ನೇ ಸೆಟ್ನ 4ನೇ ಗೇಮ್ ವೇಳೆ ನೋವು ಕಾಣಿಸಿಕೊಂಡಿತು. ಸಿನ್ನರ್ 6-7(3/7), 7-5, 3-2 ಹಿನ್ನಡೆಯಲ್ಲಿದ್ದಾಗ ಪಂದ್ಯ ನಿಲ್ಲಿಸಲಾಯಿತು.
ನಾಲ್ಕು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಸಿನ್ನರ್ ಮೊದಲ ಸೆಟ್ ಅನ್ನು ಟೈ-ಬ್ರೇಕರ್ನಲ್ಲಿ ಸೋತಿದ್ದಾರೆ. 2ನೇ ಸೆಟ್ಟನ್ನು 7-5 ಅಂತರದಿಂದ ಗೆದ್ದುಕೊಂಡ ಇಟಲಿ ಆಟಗಾರ ತಿರುಗೇಟು ನೀಡಿದರು.
3ನೇ ಸೆಟ್ನ 4ನೇ ಗೇಮ್ ವೇಳೆ ಸಿನ್ನರ್ಗೆ ನೋವು ಕಾಣಿಸಿಕೊಂಡಿದ್ದು, ಅವರ ಪರಿಸ್ಥಿತಿ ಸುಧಾರಿಸಲಿಲ್ಲ. ಆಗ ಚೇರ್ ಮೇಲೆ ಕುಳಿತುಕೊಂಡ ಸಿನ್ನರ್ ಪಂದ್ಯದಿಂದ ನಿವೃತ್ತಿಯಾಗಲು ನಿರ್ಧರಿಸಿದರು.
Next Story





