ಜಾನಿಕ್ ಸಿನ್ನರ್ ವಿಂಬಲ್ಡನ್ ಚಾಂಪಿಯನ್
ಸಿಂಗಲ್ಸ್ ಫೈನಲ್ ನಲ್ಲಿ ಎಡವಿದ ಕಾರ್ಲೋಸ್ ಅಲ್ಕರಾಝ್

PC | Reuters
ಲಂಡನ್: ಇಟಲಿಯ ಯುವ ಟೆನಿಸ್ ತಾರೆ ಜಾನಿಕ್ ಸಿನ್ನರ್ ವಿಂಬಲ್ಡನ್ ಸಿಂಗಲ್ಸ್ ಫೈನಲ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಅವರು ಡಿಫೆಂಡಿಂಗ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಝ್ ಅವರನ್ನು 4-6, 6-4, 6-4, 6-4 ಸೆಟ್ಗಳಿಂದ ಸೋಲಿಸಿ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
23 ವರ್ಷದ ಸಿನ್ನರ್ ಅವರ ಆಟ ಆರಂಭದಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದರೂ, ನಂತರದ ಮೂರು ಸೆಟ್ಗಳಲ್ಲಿ ಅವರು ಪುಟಿದೆದ್ದರು. ನಿಖರವಾದ ಸರ್ವಿಂಗ್, ಶಕ್ತಿಶಾಲಿ ಬೇಸ್ ಲೈನ್ ಆಟ ಮತ್ತು ದೃಢ ಮನೋಬಲದಿಂದ ಅವರು ಅಲ್ಕರಾಝ್ ಅವರನ್ನು ಯಶಸ್ವಿಯಾಗಿ ಎದುರಿಸಿದರು.
Next Story







