ಜಪಾನ್ ಓಪನ್: ಸೆಮಿಯಲ್ಲಿ ಲಕ್ಷ್ಯ ಸೇನ್ ಗೆ ಸೋಲು

Photo : ಲಕ್ಷ್ಯ ಸೇನ್ | PTI
ಟೋಕಿಯೊ : ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಶನಿವಾರ ಭಾರತದ ಲಕ್ಷ್ಯ ಸೇನ್ ಸೋಲನುಭವಿಸಿದ್ದಾರೆ. ಧೀರೋದಾತ್ತ ಹೋರಾಟ ನೀಡಿದರೂ, ಅವರು ವಿಶ್ವದ ನಂಬರ್ 9 ಹಾಗೂ ಏಶ್ಯನ್ ಗೇಮ್ಸ್ ಚಾಂಪಿಯನ್ ಇಂಡೋನೇಶ್ಯದ ಜೊನಾತನ್ ಕ್ರಿಸ್ಟೀ ವಿರುದ್ಧ 15-21, 21-13, 16-21 ಗೇಮ್ಗಳಿಂದ ಸೋಲನುಭವಿಸಿದರು.
ಆರಂಭಿಕ ಗೇಮ್ನಲ್ಲಿ ಸೋತ ಬಳಿಕ ಪುಟಿದೆದ್ದ ಅವರು, ಎರಡನೇ ಗೇಮ್ನಲ್ಲಿ ದಿಟ್ಟ ಪ್ರದರ್ಶನ ನೀಡಿದರು. ಅಂತಿಮವಾಗಿ ಆ ಗೇಮನ್ನು ಗೆದ್ದು ಎದುರಾಳಿಯ ಮೇಲೆ ಒತ್ತಡ ಹೇರಿದರು. ಆದರೆ, ಅದೇ ಲಯವನ್ನು ಕೊನೆಯವರೆಗೂ ಕಾಯ್ದುಕೊಂಡು ಹೋಗಲು ಅವರಿಗೆ ಸಾಧ್ಯವಾಗಲಿಲ್ಲ. ಅಂತಿಮ ಗೇಮನ್ನು ಕಳೆದುಕೊಂಡ ಅವರು ಸೋಲೊಪ್ಪಿಕೊಂಡರು. ಭಾರತದ ಇನ್ನೋರ್ವ ಸ್ಪರ್ಧಿ ಎಚ್.ಎಸ್. ಪ್ರಣಯ್ ಈಗಾಗಲೇ ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಸೋತು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
Next Story





