ಜಪಾನ್ ಓಪನ್ ಟೆನಿಸ್ ಟೂರ್ನಿ | ಅಲ್ಕರಾಝ್ ಸೆಮಿ ಫೈನಲ್ಗೆ, ರೂನ್ಗೆ ಸೋಲು

ಕಾರ್ಲೊಸ್ ಅಲ್ಕರಾಝ್ |PC : @carlosalcaraz
ಟೋಕಿಯೊ, ಸೆ.28: ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ ಅಮೆರಿಕದ ಬ್ರೆಂಡನ್ ನಕಶಿಮಾರನ್ನು ನೇರ ಸೆಟ್ಗಳ ಅಂತರದಿಂದ ಮಣಿಸಿ ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ತಲುಪಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಸ್ಪೇನ್ ಆಟಗಾರ ಅಲ್ಕರಾಝ್ ಅವರು 6-2, 6-4 ಸೆಟ್ಗಳ ಅಂತರದಿಂದ ನಕಶಿಮಾರನ್ನು ಮಣಿಸಿದರು.
ಮಂಗಳವಾರ ನಡೆದ ಆರಂಭಿಕ ಪಂದ್ಯದಲ್ಲಿ ಗಾಯದ ಭೀತಿಯಿಂದ ಹೊರಬಂದ ಅಲ್ಕರಾಝ್ ಅವರು ರವಿವಾರ 1 ಗಂಟೆ, 20 ನಿಮಿಷಗಳ ಕಾಲ ನಡೆದ ಅಂತಿಮ-8ರ ಪಂದ್ಯದಲ್ಲಿ ನಕಶಿಮಾರನ್ನು ಸೋಲಿಸಿ ಈ ವರ್ಷ 65ನೇ ಗೆಲುವು ದಾಖಲಿಸಿದರು.
ಈ ತಿಂಗಳಾರಂಭದಲ್ಲಿ ಯು.ಎಸ್.ಓಪನ್ನಲ್ಲಿ ಚಾಂಪಿಯನ್ ಆಗಿ ತನ್ನ 6ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ನಂತರ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ ಪಡೆದಿರುವ 22ರ ಹರೆಯದ ಅಲ್ಕರಾಝ್ ಮುಂದಿನ ಸುತ್ತಿನಲ್ಲಿ ನಾರ್ವೆಯ ಕಾಸ್ಪರ್ ರೂಡ್ ಅವರನ್ನು ಎದುರಿಸಲಿದ್ದಾರೆ.
ಇದಕ್ಕೂ ಮೊದಲು ನಾಲ್ಕನೇ ಶ್ರೇಯಾಂಕದ ರೂಡ್ ಅವರು ಆಸ್ಟ್ರೇಲಿಯದ ಕ್ವಾಲಿಫೈಯರ್ ಅಲೆಕ್ಸಾಂಡ್ರಾ ಯುಕಿಕ್ರನ್ನು 6-3, 6-2 ನೇರ ಸೆಟ್ಗಳ ಅಂತರದಿಂದ ಮಣಿಸಿದರು.
ಡೆನ್ಮಾರ್ಕ್ ಆಟಗಾರ ಹೋಲ್ಗರ್ ರೂನ್ ವಿಶ್ವದ 86ನೇ ರ್ಯಾಂಕಿನ ಬ್ರೂಕ್ಸ್ಬಿ ವಿರುದ್ಧ 3-6,3-6 ಸೆಟ್ಗಳ ಅಂತರದಿಂದ ಸೋತು ಆಘಾತ ಅನುಭವಿಸಿದರು.
ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಸೆಮಿ ಫೈನಲ್ಗೆ ತಲುಪಿರುವ ಅಮೆರಿಕದ ಆಟಗಾರ ಟೇಲರ್ ಫ್ರಿಟ್ಝ್ 2ನೇ ಸೆಟ್ ಸೋಲಿನಿಂದ ಚೇತರಿಸಿಕೊಂಡು ತಮ್ಮದೇ ದೇಶದ ಆಟಗಾರ ಸೆಬಾಸ್ಟಿಯನ್ ಕೊರ್ಡಾರನ್ನು 6-3, 6-7(5), 6-3 ಸೆಟ್ಗಳ ಅಂತರದಿಂದ ಮಣಿಸಿದರು.
2ನೇ ಶ್ರೇಯಾಂಕದ ಫ್ರಿಟ್ಝ್ ಅವರು ಸೋಮವಾರ ಬಿಡುಗಡೆಯಾಗಲಿರುವ ಎಟಿಪಿ ರ್ಯಾಂಕಿಂಗ್ನಲ್ಲಿ ನೊವಾಕ್ ಜೊಕೊವಿಕ್ರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಲು ಸಜ್ಜಾಗಿದ್ದಾರೆ. ಸೆಮಿ ಫೈನಲ್ನಲ್ಲಿ ಅಮೆರಿಕದ ಇನ್ನೋರ್ವ ಆಟಗಾರ ಬ್ರೂಕ್ಸ್ ಬಿ ಅವರನ್ನು ಎದುರಿಸಲಿದ್ದಾರೆ.







