ಐದನೇ ಟೆಸ್ಟ್ | ಭಾರತ ಕ್ರಿಕೆಟ್ ತಂಡದಿಂದ ಬಿಡುಗಡೆಯಾದ ಜಸ್ಪ್ರಿತ್ ಬುಮ್ರಾ

ಜಸ್ಪ್ರಿತ್ ಬುಮ್ರಾ | PC : PTI
ಲಂಡನ್, ಆ.1: ದ ಓವಲ್ ಮೈದಾನದಲ್ಲಿ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ಈಗ ನಡೆಯುತ್ತಿರುವ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಆಡುತ್ತಿರುವ ಭಾರತ ಕ್ರಿಕೆಟ್ ತಂಡದಿಂದ ಜಸ್ಪ್ರಿತ್ ಬುಮ್ರಾರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಬಿಸಿಸಿಐ ಶುಕ್ರವಾರ ದೃಢಪಡಿಸಿದೆ.
ಭಾರತ ತಂಡದ ಒತ್ತಡವನ್ನು ನಿಭಾಯಿಸುವ ನೀತಿಯ ಭಾಗವಾಗಿ ಇದು ಪೂರ್ವಯೋಜನೆಯ ನಡೆಯಾಗಿದೆ. ಬುಮ್ರಾ ಅವರು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೇವಲ ಮೂರು ಪಂದ್ಯವನ್ನು ಆಡುತ್ತಾರೆ ಎಂದು ಸರಣಿ ಆರಂಭಕ್ಕೆ ಮೊದಲೇ ಮುಖ್ಯ ಕೋಚ್ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದರು.
ವೇಗದ ಬೌಲರ್ ಬುಮ್ರಾ ಅವರು ಮೊದಲನೇ, ಮೂರನೇ ಹಾಗೂ 4ನೇ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. 2ನೇ ಹಾಗೂ ಇದೀಗ ಕೊನೆಯ ಪಂದ್ಯದಿಂದ ಹೊರಗುಳಿದಿದ್ದಾರೆ. ಬುಮ್ರಾ 26ರ ಸರಾಸರಿಯಲ್ಲಿ 14 ವಿಕೆಟ್ಗಳನ್ನು ಉರುಳಿಸಿ ತನ್ನ ಅಭಿಯಾನ ಅಂತ್ಯಗೊಳಿಸಿದರು.
Next Story





