ವಿಮಾನ ನಿಲ್ದಾಣದ ಚೆಕ್ಇನ್ ಸರದಿಯಲ್ಲಿ ನಿಂತಿದ್ದ ಬೂಮ್ರಾ ತಾಳ್ಮೆ ಕಳೆದುಕೊಂಡಿದ್ದೇಕೆ?; ವಿಡಿಯೊ ವೈರಲ್

Screengrab: X/@Goatlified
ಹೊಸದಿಲ್ಲಿ: ವಿಮಾನ ನಿಲ್ದಾಣದಲ್ಲಿ ಚೆಕ್ಇನ್ ಸರದಿಯಲ್ಲಿ ನಿಂತಿದ್ದ ಭಾರತದ ಸ್ಟಾರ್ ಕ್ರಿಕೆಟಿಗ ಜಸ್ಪ್ರೀತ್ ಬೂಮ್ರಾ ಅಭಿಮಾನಿಯ ಕಿರಿಕಿರಿ ತಾಳಲಾರದೇ ತಾಳ್ಮೆ ಕಳೆದುಕೊಂಡು ಅಭಿಮಾನಿಯ ಮೊಬೈಲ್ ಕಿತ್ತುಕೊಂಡ ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಭಿಮಾನಿಯೊಬ್ಬ ಭಾರತದ ವೇಗಿಯ ಅನುಮತಿ ಪಡೆಯದೇ ಸೆಲ್ಫಿ ಚಿತ್ರೀಕರಿಸಿಕೊಳ್ಳುತ್ತಿದ್ದ. ಗಮನಕ್ಕೆ ಬಂದ ತಕ್ಷಣ ಬೂಮ್ರಾ ಚಿತ್ರೀಕರಣ ನಿಲ್ಲಿಸುವಂತೆ ಎಚ್ಚರಿಕೆ ನೀಡಿದರು. ಆದರೆ ಅಭಿಮಾನಿ ಅದನ್ನು ನಿರ್ಲಕ್ಷಿಸಿದಾಗ ಆಕ್ರೋಶಗೊಂಡ ಬೂಮ್ರಾ ಫೋನ್ ಕಸಿದುಕೊಂಡರು ಎಂದು ವರದಿಯಾಗಿದೆ.
ಅವರ ನಡುವಿನ ಸಂಭಾಷಣೆಯ ತುಣುಕುಗಳು ಹೀಗಿವೆ:
ಅಭಿಮಾನಿ - ಆಪ್ಕೇ ಸಾಥ್ ಹಿ ಜಾವೂಂಗಾ ಸರ್ ಮೀ (ಸರ್, ನಾನು ನಿಮ್ಮೊಂದಿಗೆಯೇ ಬರುತ್ತೇನೆ)
ಬೂಮ್ರಾ: ಫೋನ್ ಗಿರ್ ಗಯಾ ಆಪ್ಕಾ ತೋ ಮೇರೆಕೊ ಬ್ಲೇಮ್ ನಹಿ (ನಿಮ್ಮ ಫೋನ್ ಬಿದ್ದರೆ ನನ್ನನ್ನು ದೂಷಿಸಬೇಡ)
ಅಭಿಮಾನಿ: ಕೋಯಿ ಬಾತ್ ನಹಿ ಸರ್ (ಅಡ್ಡಿಯಲ್ಲ ಸರ್)
ಬೂಮ್ರಾ: ಕೂಲ್
ಈ ಎಚ್ಚರಿಕೆ ನೀಡಿದ ಬಳಿಕ ಬೂಮ್ರಾ ಫೋನ್ ಕಿತ್ತುಕೊಂಡಲ್ಲಿಗೆ ಘಟನೆ ಮುಕ್ತಾಯವಾಯಿತು.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 17 ರನ್ಗಳಿಗೆ 2 ವಿಕೆಟ್ ಕಿತ್ತು ಮಿಂಚಿದ್ದ ಬೂಮ್ರಾ ಎರಡನೇ ಪಂದ್ಯದಲ್ಲಿ 45 ರನ್ ನೀಡಿದರೂ ಯಾವುದೇ ವಿಕೆಟ್ ಪಡೆದಿರಲಿಲ್ಲ. ಧರ್ಮಶಾಲೆಯಲ್ಲಿ ನಡೆದ ಮೂರನೇ ಪಂದ್ಯಕ್ಕೆ ಬೂಮ್ರಾ ಅಲಭ್ಯರಾಗಿದ್ದರು.
What an arrogant behavior by Jasprit Bumrah. First he threatened his fan that he would throw his phone, and later he snatched the fan's phone. pic.twitter.com/O2e4jSLw7s
— 𝐆𝐨𝐚𝐭𝐥𝐢𝐟𝐢𝐞𝐝 👑 (@Goatlified) December 17, 2025







