ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಪಂದ್ಯಗಳು: ಸ್ಟೀವ್ ವಾ ದಾಖಲೆ ಮುರಿದ ಜೋ ರೂಟ್
ತೆಂಡುಲ್ಕರ್, ಆ್ಯಂಡರ್ಸನ್ ದಾಖಲೆ ಮುರಿಯುವ ಹಾದಿಯಲ್ಲಿ ಇಂಗ್ಲೆಂಡ್ ನಾಯಕ

Photo Credit : X/@englandcricket
ಎಜ್ಬಾಸ್ಟನ್: ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಜೋ ರೂಟ್ ಆಸ್ಟ್ರೇಲಿಯದ ದಂತಕತೆ ಸ್ಟೀವ್ ವಾ ದಾಖಲೆಯನ್ನು ಮುರಿದರು. ಪಾಕಿಸ್ತಾನ ತಂಡದ ವಿರುದ್ಧ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ರೂಟ್ ಈ ಸಾಧನೆ ಮಾಡಿದರು.
ಪ್ರಸಕ್ತ ಸರಣಿಯಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿರುವ ರೂಟ್, ಈ ತನಕ 169 ಟೆಸ್ಟ್ ಪಂದ್ಯಗಳನ್ನಾಡಿದ್ದು, ಸ್ಟೀವ್ ವಾ(168)ದಾಖಲೆಯನ್ನು ಮುರಿದರು. ಇದೀಗ ರೂಟ್ ಗಿಂತ ಸಚಿನ್ ತೆಂಡುಲ್ಕರ್ ಹಾಗೂ ಜೇಮ್ಸ್ ಆ್ಯಂಡರ್ಸನ್ ಮುಂದಿದ್ದಾರೆ.
ಇಂಗ್ಲೆಂಡ್ ತಂಡವು 2010ರ ನಂತರ ಮೊದಲ ಬಾರಿ ಸರಣಿಯ ಎಲ್ಲ ಮೂರು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಎರಡನೇ ಬಾರಿ ಇಂಗ್ಲೆಂಡ್ ತಂಡದ ನಾಯಕತ್ವವಹಿಸಿರುವ ರೂಟ್ ಅವರು ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 103 ರನ್ ಗಳಿಂದಲೂ ಹಾಗೂ ಎರಡನೇ ಟೆಸ್ಟ್ ಪಂದ್ಯವನ್ನು 194 ರನ್ಗಳ ಅಂತರದಿಂದಲೂ ಜಯಿಸಿದ್ದರು. ಇದೀಗ ಆತಿಥೇಯರು ಸರಣಿಯಲ್ಲಿ ಕ್ಲೀನ್ಸ್ವೀಪ್ ಮಾಡುವತ್ತ ಗಮನ ಹರಿಸಿದ್ದಾರೆ.
►ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಪಂದ್ಯಗಳನ್ನಾಡಿದ ಆಟಗಾರರು
200- ಸಚಿನ್ ತೆಂಡುಲ್ಕರ್
188- ಜೇಮ್ಸ್ ಆ್ಯಂಡರ್ಸನ್
169- ಜೋ ರೂಟ್
168- ಸ್ಟೀವ್ ವಾ
168- ರಿಕಿ ಪಾಂಟಿಂಗ್






