WWEಗೆ ನಿವೃತ್ತಿ ಘೋಷಿಸಿದ ದಂತಕತೆ ಜಾನ್ ಸೀನ

ಜಾನ್ ಸೀನ (Photo Credit: WWE / Peacock)
ಟೊರೊಂಟೊ (ಕೆನಡಾ): 16 ಬಾರಿಯ ವಿಶ್ವ ಚಾಂಪಿಯನ್, WWE ದಂತಕತೆಯಾದ ಜಾನ್ ಸೀನ ತಮ್ಮ ರಸ್ಲಿಂಗ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
WWE ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊದಲ್ಲಿ ಜಾನ್ ಕುಸ್ತಿಯ ಅಖಾಡಕ್ಕೆ ನಿವೃತ್ತಿ ಘೋಷಿಸಿದ್ದಾರೆ. 2025ರಲ್ಲಿ ಅವರು WWE ಕ್ರೀಡಾ ಪ್ರಕಾರಕ್ಕೆ ವಿದಾಯ ಹೇಳಲಿದ್ದಾರೆ.
WWEಗೆ ಅಚ್ಚರಿಯ ವಿದಾಯ ಘೋಷಿಸಿರುವ ಜಾನ್ ಸೀನ, “ಇಂದು ರಾತ್ರಿ ನಾನು WWEಗೆ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ವಿಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.
ಜಾನ್ ಅವರ ವಿದಾಯವು ಅವರ ಅಭಿಮಾನಿಗಳ ತೀವ್ರ ಬೇಸರಕ್ಕೆ ಕಾರಣವಾಗಿದೆ.
2001ರಲ್ಲಿ WWEಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದ ಜಾನ್ , ತಮ್ಮ ನಟನೆಯ ವೃತ್ತಿ ಜೀವನದಲ್ಲಿ ಬೆಳವಣಿಗೆ ಕಾಣುತ್ತಿದ್ದುದರಿಂದ, 2018ರಲ್ಲಿ ಅರೆಕಾಲಿಕ ಒಪ್ಪಂದ ಮಾಡಿಕೊಂಡಿದ್ದರು.
Next Story





