ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿ: ಏಳು ಬಾರಿಯ ಚಾಂಪಿಯನ್ ಜರ್ಮನಿ ಫೈನಲ್ ಗೆ, ಭಾರತಕ್ಕೆ ಸೋಲು

Photo : Hockey India
ಚೆನ್ನೈ: ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಏಕಪಕ್ಷೀಯವಾಗಿ ಸಾಗಿದ ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ಏಳು ಬಾರಿಯ ಚಾಂಪಿಯನ್ಸ್ ಜರ್ಮನಿ ತಂಡವು ಆತಿಥೇಯ ಭಾರತ ತಂಡವನ್ನು 5-1 ಗೋಲುಗಳ ಅಂತರದಿಂದ ಮಣಿಸಿತು. ಈ ಮೂಲಕ ಫೈನಲ್ಗೆ ಪ್ರವೇಶಿಸಿದ್ದು, ಸ್ಪೇನ್ ತಂಡದ ಸವಾಲನ್ನು ಎದುರಿಸಲಿದೆ.
ರವಿವಾರ ನಡೆದ ಅಂತಿಮ-4ರ ಪಂದ್ಯದಲ್ಲಿ ಭಾರತ ತಂಡವು 50ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿತು. ಅನ್ಮೋಲ್ ಎಕ್ಕಾ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.
ಜರ್ಮನಿ ತಂಡವು 14ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ಜರ್ಮನಿ ಮೊದಲ ಕ್ವಾರ್ಟರ್ನಲ್ಲಿ ಮತ್ತೊಂದು ಗೋಲು ಗಳಿಸಿ ಮೇಲುಗೈ ಸಾಧಿಸಿತು. ಜರ್ಮನಿಯು 30ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಮೊದಲಾರ್ಧದಲ್ಲಿ 3-0 ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್ನಲ್ಲಿ 4ನೇ ಗೋಲು ಗಳಿಸಿದ ಜರ್ಮನಿ ಸಂಪೂರ್ಣ ಮೇಲುಗೈ ಸಾಧಿಸಿತು. ಕೊನೆಯ ಅವಧಿಯಲ್ಲಿ ಐದನೇ ಗೋಲು ಗಳಿಸಿ ಭಾರತದ ಗಾಯಕ್ಕೆ ಉಪ್ಪು ಸವರಿತು.
Next Story





