ಖೇಲೊ ಇಂಡಿಯಾ ಯೂತ್ ಗೇಮ್ಸ್ ಬಾಸ್ಕೆಟ್‌ಬಾಲ್ | ಕರ್ನಾಟಕದ ಬಾಲಕಿಯರ ತಂಡಕ್ಕೆ ಪ್ರಶಸ್ತಿ
ಹೊಸದಿಲ್ಲಿ: ಬಿಹಾರದ ಪಾಟ್ನಾದಲ್ಲಿ ಗುರುವಾರ ನಡೆದ ಖೇಲೊ ಇಂಡಿಯಾ ಯೂತ್ ಗೇಮ್ಸ್ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಕರ್ನಾಟಕದ ಬಾಲಕಿಯರ ಬಾಸ್ಕೆಟ್‌ಬಾಲ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ಬಾಲಕಿಯರ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಹರ್ಯಾಣ ತಂಡವನ್ನು 86-61 ಅಂತರದಿಂದ ಮಣಿಸಿದೆ. ಕರ್ನಾಟಕದ ಪರ ಮಹೇಕ್ ಶರ್ಮಾ 21, ನಿಧಿ ಶ್ರೀನಿವಾಸ್ 17, ಟಿಶಾ ವಿ. 10 ಅಂಕ ಗಳಿಸಿ ಗೆಲುವಿಗೆ ನೆರವಾದರು.
ಹರ್ಯಾಣದ ಪರ ಭೂಮಿ ಕಟಾರಿಯಾ 22, ವೈಷ್ಣವಿ 13 ಅಂಕ ಗಳಿಸಿದರು.
ಇದಕ್ಕೂ ಮೊದಲು ಸೆಮಿ ಫೈನಲ್ ನಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ತಂಡವನ್ನು 79-65 ಅಂತರದಿಂದ ಮಣಿಸಿತ್ತು.
Next Story





