ಖೋ ಖೋ ವಿಶ್ವಕಪ್: ಭಾರತದ ಮಹಿಳಾ ತಂಡ ಚಾಂಪಿಯನ್
ಫೈನಲ್ನಲ್ಲಿ ನೇಪಾಳ ವಿರುದ್ಧ ಜಯಭೇರಿ

PC : X \ @Kkwcindia
ಹೊಸದಿಲ್ಲಿ: ನೇಪಾಳ ತಂಡವನ್ನು ಸೋಲಿಸಿದ ಭಾರತೀಯ ಮಹಿಳೆಯರ ತಂಡವು ಮೊತ್ತ ಮೊದಲ ಬಾರಿ ಖೋ ಖೋ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ರವಿವಾರ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪ್ರಿಯಾಂಕಾ ನೇತೃತ್ವದ ಭಾರತ ತಂಡವು ನೇಪಾಳ ತಂಡವನ್ನು 78-40 ಅಂತರದಿಂದ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಭಾರತವು ಚೇಸ್ ಹಾಗೂ ಡಿಫೆನ್ಸ್ನಲ್ಲಿ ಪ್ರಾಬಲ್ಯ ಸಾಧಿಸಿ ಎದುರಾಳಿ ತಂಡಕ್ಕೆ ಸವಾಲಾಯಿತು.
ಭಾರತದ ಮಹಿಳಾ ತಂಡವು ಟೂರ್ನಿಯುದ್ದಕ್ಕೂ ಅಜೇಯ ದಾಖಲೆ ಕಾಯ್ದುುಕೊಂಡಿತು. ಎ ಗುಂಪಿನಲ್ಲಿ ಎಲ್ಲ 3 ಪಂದ್ಯಗಳನ್ನು ಜಯಿಸಿ ಅಗ್ರ ಸ್ಥಾನ ಪಡೆದಿತ್ತು. ಸೆಮಿ ಫೈನಲ್ನಲಿ ದಕ್ಷಿಣ ಆಫ್ರಿಕ ತಂಡವನ್ನು 66-16 ಅಂತರದಿಂದ ಮಣಿಸಿ ಫೈನಲ್ಗೆ ತಲುಪಿತ್ತು.
ನೇಪಾಳ ತಂಡ ಕೂಡ ಫೈನಲ್ ತನಕ ಅಜೇಯ ದಾಖಲೆ ಉಳಿಸಿಕೊಂಡಿತ್ತು.
— Kho Kho World Cup India 2025 (@Kkwcindia) January 19, 2025
Congratulations to #TeamIndia women for claiming the - #KhoKhoWorldCup #KKWC2025 #TheWorldGoesKho #Khommunity #KhoKho #KKWCWomen pic.twitter.com/tqlBPbTIdc
Indian Women's Team won the first ever Kho Kho World Cup by defeating Nepal.#KhoKhoWorldCup pic.twitter.com/g9W0AjCw6U
— Defence Squad (@Defence_Squad_) January 19, 2025