ಕಿಡಂಬಿ ಶ್ರೀಕಾಂತ್ 2ನೇ ಸುತ್ತಿಗೆ, ಪ್ರಣಯ್ ಮನೆಗೆ
ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿ

ಎಚ್.ಎಸ್. ಪ್ರಣಯ್ | Photo: PTI
ಪ್ಯಾರಿಸ್ : ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬುಧವಾರ ಭಾರತದ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ, ಇನ್ನೋರ್ವ ಭಾರತೀಯ ಎಚ್.ಎಸ್. ಪ್ರಣಯ್ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ 24ನೇ ವಿಶ್ವ ರ್ಯಾಂಕಿಂಗ್ನ ಶ್ರೀಕಾಂತ್ 14ನೇ ರ್ಯಾಂಕಿಂಗ್ನ ಚೈನೀಸ್ ತೈಪೆಯ ಚೌತಿಯನ್ ಚೆನ್ರನ್ನು 21-15, 20-22, 21-8 ಗೇಮ್ಗಳಲ್ಲಿ ಸೋಲಿಸಿದರು. ಪಂದ್ಯವು 66 ನಿಮಿಷಗಳ ಕಾಲ ಸಾಗಿತು. ಇದು ಚೌತಿಯನ್ ಚೆನ್ ವಿರುದ್ದದ ಏಳು ಮುಖಾಮುಖಿಗಳಲ್ಲಿ ಶ್ರೀಕಾಂತ್ರ ಮೂರನೇ ಗೆಲುವಾಗಿದೆ.
ಎರಡನೇ ಸುತ್ತಿನಲ್ಲಿ, 2021ರ ವಿಶ್ವ ಚಾಂಪಿಯನ್ ಶಿಪ್ ನ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಚೀನಾದ 17ನೇ ವಿಶ್ವ ರ್ಯಾಂಕಿಂಗ್ ನ ಲು ಗುವಾಂಗ್ ಝುರನ್ನು ಎದುರಿಸಲಿದ್ದಾರೆ.
ಲು ಗುವಾಂಗ್ ಝು ಇನ್ನೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಎಚ್.ಎಸ್. ಪ್ರಣಯ್ ರನ್ನು 21-17, 21-17 ನೇರ ಗೇಮ್ ಗಳಿಂದ ಸೋಲಿಸಿದರು.
Next Story





