ಒಂದೇ ಪಂದ್ಯದಲ್ಲಿ ಎರಡು ದಾಖಲೆ ಸೃಷ್ಟಿಸಿದ 'ಕಿಂಗ್' ಕೊಹ್ಲಿ

PC: x.com/Aware_Indian7
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಹಾಗೂ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಶುಕ್ರವಾರ ಐಪಿಎಲ್ ಇತಿಹಾಸದಲ್ಲೇ 800 ಬೌಂಡರಿಗಳ ಮೈಲುಗಲ್ಲು ದಾಟಿದ ಪ್ರಪ್ರಥಮ ಆಟಗಾರ ಎಂಬ ದಾಖಲೆ ಸೃಷ್ಟಿಸಿದರು.
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಈ ಐತಿಹಾಸಿಕ ಸಾಧನೆ ಮಾಡಿದರು. ಕಗಿಸೋ ರಬಾಡ ಅವರ ಬೌಲಿಂಗ್ನಲ್ಲಿ ಮೊದಲ ಬೌಂಡರಿ ಸಿಡಿಸಿದ ಕೊಹ್ಲಿ ತಮ್ಮ ವರ್ಣರಂಜಿತ ಇತಿಹಾಸದಲ್ಲಿ ಮತ್ತೊಂದು ಪುಟ ತೆರೆದರು.
ಐಪಿಎಲ್ನಲ್ಲಿ ಅತಿಹೆಚ್ಚು ಬೌಂಡರಿ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಶಿಖರ್ ಧವನ್ (768), ಡೇವಿಡ್ ವಾರ್ನರ್ (663) ಮತ್ತು ರೋಹಿತ್ ಶರ್ಮಾ (653) ನಂತರದ ಸ್ಥಾನಗಳಲ್ಲಿದ್ದಾರೆ. ಇದರ ಜೊತೆಗೆ, ಒಂದೇ ತಂಡದ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಕೀರ್ತಿಗೂ ಕೊಹ್ಲಿ ಪಾತ್ರರಾದರು. ಆರ್ಸಿಬಿ ಪರ ಆಡುತ್ತಿರುವ ಕೊಹ್ಲಿ ಒಟ್ಟು 300 ಸಿಕ್ಸರ್ಗಳನ್ನು ಐಪಿಎಲ್ನಲ್ಲಿ ಸಿಡಿಸಿದ್ದಾರೆ.
Next Story




