ವೇಗವಾಗಿ 2,000 ರನ್ ಗಳಿಸಿದ ಭಾರತದ ಮೂರನೇ ಆಟಗಾರ ಕಿಶನ್

ಇಶಾನ್ ಕಿಶನ್ | Photo Credit : PTI
ಹ್ಯಾಮಿಲ್ಟನ್, ನ.1: ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಐದನೇ ಹಾಗೂ ಕೊನೆಯ ಟಿ-20 ಪಂದ್ಯದ ವೇಳೆ ತಮ್ಮ ಲಯ ಕಂಡುಕೊಂಡ ಇಶಾನ್ ಕಿಶನ್ ಆಕರ್ಷಕ ಅರ್ಧಶತಕ ಗಳಿಸಿ ಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 2,000 ರನ್ ಗಳ ಮೈಲಿಗಲ್ಲು ತಲುಪಿದರು.
ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ಕಿಶನ್ ರವಿವಾರ ಈ ಸಾಧನೆ ಮಾಡಿದರು. ಕಡಿಮೆ ಎಸೆತಗಳಲ್ಲಿ 2,000 ರನ್ ಪೂರೈಸಿದ ಭಾರತದ ಮೂರನೇ ಬ್ಯಾಟರ್ ಎನಿಸಿಕೊಂಡರು.
ಕಿಶನ್ 1,345 ಎಸೆತಗಳಲ್ಲಿ ತಮ್ಮ 2,000 ರನ್ ಪೂರೈಸಿದರೆ, ಅಭಿಷೇಕ್ ಶರ್ಮಾ ಹಾಗೂ ಸೂರ್ಯಕುಮಾರ್ ಭಾರತೀಯರ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದಾರೆ.
ಅಭಿಷೇಕ್ ಕೇವಲ 1,024 ಎಸೆತಗಳಲ್ಲಿ 2,000 ರನ್ ಪೂರೈಸಿದ್ದರೆ, ಸೂರ್ಯಕುಮಾರ್ 1,164 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.
ಎಡಗೈ ಬ್ಯಾಟರ್ ಕಿಶನ್ 32 ಎಸೆತಗಳಲ್ಲಿ ಐದು ಸಿಕ್ಸರ್, ಐದು ಬೌಂಡರಿಗಳ ಸಹಿತ 61 ರನ್ ಗಳಿಸಿದ್ದಾಗ ಈ ಸಾಧನೆ ಮಾಡಿದರು. 2,000 ರನ್ ಪೂರೈಸಲು ಕಿಶನ್ಗೆ 45 ರನ್ ಅಗತ್ಯವಿತ್ತು. ಕಿವೀಸ್ ನಾಯಕ ಸ್ಯಾಂಟ್ನರ್ ಅವರ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಕಿಶನ್ ಈ ಮೈಲಿಗಲ್ಲು ತಲುಪಿದರು.
ಟಿ-20 ಕ್ರಿಕೆಟ್ ನಲ್ಲಿ ಕಡಿಮೆ ಎಸೆತಗಳಲ್ಲಿ 2,000 ರನ್ ಪೂರೈಸಿದವರು
• 1,024 – ಅಭಿಷೇಕ್ ಶರ್ಮಾ
• 1,164 – ಸೂರ್ಯಕುಮಾರ್ ಯಾದವ್
• 1,345 – ಇಶಾನ್ ಕಿಶನ್






