ಇಂಗ್ಲೆಂಡ್ ನಲ್ಲಿ 1,000 ರನ್ ಗಳಿಸಿದ 4ನೇ ಭಾರತೀಯ ಆಟಗಾರ ಕೆ ಎಲ್ ರಾಹುಲ್

ಕೆ ಎಲ್ ರಾಹುಲ್ | PC : PTI
ಮ್ಯಾಂಚೆಸ್ಟರ್, ಜು. 23: ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ 1,000 ರನ್ಗಳ ಗಡಿಯನ್ನು ದಾಟಿದ ನಾಲ್ಕನೇ ಭಾರತೀಯ ಕ್ರಿಕೆಟಿಗ ಕೆ.ಎಲ್. ರಾಹುಲ್ ಆಗಿದ್ದಾರೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯುತ್ತಿರುವ ಆತಿಥೇಯ ದೇಶದ ವಿರುದ್ಧದ ಟೆಸ್ಟ್ ಸರಣಿಯ 4ನೇ ಪಂದ್ಯದ ಮೊದಲ ದಿನವಾದ ಬುಧವಾರ ಅವರು ಈ ಮೈಲಿಗಲ್ಲನ್ನು ದಾಟಿದರು.
32 ವರ್ಷದ ಆರಂಭಿಕ ಬ್ಯಾಟರ್ ರಾಹುಲ್ ಹಾಲಿ ಇಂಗ್ಲೆಂಡ್ ಪ್ರವಾಸದಲ್ಲಿ ತನ್ನ ಅಮೋಘ ನಿರ್ವಹಣೆಯನ್ನು ಮುಂದುವರಿಸಿದ್ದಾರೆ. ಈ ಸರಣಿಯಲ್ಲಿ ಅವರು ಈಗಾಗಲೇ 400 ರನ್ಗಳನ್ನು ದಾಟಿದ್ದಾರೆ.
ಅವರು ಈಗಾಗಲೇ ಈ ಪ್ರವಾಸದಲ್ಲಿ 2 ಶತಕಗಳನ್ನು ಬಾರಿಸಿದ್ದಾರೆ. ಈಗ ಅವರು ಇಂಗ್ಲೆಂಡ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯರು ಗಳಿಸಿದ ಅತ್ಯಧಿಕ ಟೆಸ್ಟ್ ರನ್ಗಳ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ (1,575), ರಾಹುಲ್ ದ್ರಾವಿಡ್ (1,376) ಮತ್ತು ಸುನೀಲ್ ಗವಾಸ್ಕರ್ (1,152)ಗಿಂತ ಹಿಂದಿದ್ದಾರೆ.
Next Story





