ಸಚಿನ್ ಸಾರ್ವಕಾಲಿಕ ದಾಖಲೆ ಹಿಂದಿಕ್ಕಿದ ಕೊಹ್ಲಿ; ಚಾಹಲ್ ಹಾಸ್ಯಭರಿತ ಅಭಿನಂದನೆ

ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ 349 ರನ್ ಗಳ ಭಾರಿ ಮೊತ್ತ ಕಲೆಹಾಕುವಲ್ಲಿ ಪ್ರಧಾನ ಪಾತ್ರ ವಹಿಸಿದ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ, ಏಕದಿನ ಪಂದ್ಯದಲ್ಲಿ 52ನೇ ಶತಕ ದಾಖಲಿಸುವ ಮೂಲಕ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ಅಳಿಸಿಹಾಕಿದರು.
ಕೊಹ್ಲಿ ಜತೆಗಿನ ನಿಕಟ ಸಂಬಂಧಕ್ಕೆ ಹೆಸರಾದ ಖ್ಯಾತ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಈ ಸಂದರ್ಭ ತಮ್ಮ ಸಂತಸವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಕ್ಲೀನ್ ಹಿಟ್ಟಿಂಗ್, ನಿಖರ ಪ್ಲೇಸ್ಮೆಂಟ್ ಮೂಲಕ ಕೊಹ್ಲಿ 120 ಎಸೆತಗಳಲ್ಲಿ 135 ರನ್ ಗಳಿಸಿದಾಗ ವೀಕ್ಷಕ ವಿವರಣೆಗಾರರಾಗಿದ್ದ ಚಾಹಲ್ ಸಂತಸಕ್ಕೆ ಪಾರವೇ ಇರಲಿಲ್ಲ.
ಅವರ ಮೊದಲ ಜಾಲತಾಣ ಪೋಸ್ಟ್ ನಲ್ಲಿ ಅವರಿಗೆ ಎಷ್ಟು ರೋಮಾಂಚನವಾಗಿತ್ತು ಎನ್ನುವುದನ್ನು ಚಾಹಲ್ ಬಣ್ಣಿಸಿದ್ದಾರೆ. "ಬಸ್ ಮುಜ್ಸೇ 52 ಸೆಂಚುರೀಸ್ ಜಾಯ್ದೇ; ವೆಯ್ಟಿಂಗ್ ಕಬ್ ಕೊಹ್ಲಿ ಭಾಯಿಯಾ ಆಪ್ 100 ಸೆಂಚುರಿ ಜಾಯ್ದಾ ಹೋಂಗೆ ಮುಜೇ (ನನಗಿಂತ ಕೇವಲ 52 ಶತಕ ಮಾತ್ರ ಮುಂದಿದ್ದೀರಿ. ನೀವು ಯಾವಾಗ ನನಗಿಂತ 100 ಶತಕ ಮುಂದಾಗುತ್ತೀರಿ ಎನ್ನುವ ಕ್ಷಣವನ್ನು ಕಾಯುತ್ತಿದ್ದೇನೆ)" ಎಂದು ಉದ್ಗರಿಸಿದ್ದಾರೆ.
ಭಾನುವಾರದ ಸಾಧನೆಯೊಂದಿಗೆ ವಿರಾಟ್ ಕೊಹ್ಲಿ ಒಂದೇ ವಿಧದ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದುವರೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ 51 ಶತಕಗಳನ್ನು ಗಳಿಸಿದ ದಾಖಲೆಯನ್ನು ಸಚಿನ್ ಹೊಂದಿದ್ದರು. ಆದರೆ ಕೊಹ್ಲಿ ಇದೀಗ ಸಚಿನ್ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್ ನಲ್ಲಿ 52 ಶತಕ ಸಿಡಿಸಿದ ದಾಖಲೆ ನಿರ್ಮಿಸಿದರು.
Bus mujhse 52 century's jayda 🤣 waiting kab @imVkohli bhaiya aap 100 century's jayda honge mujhse ❤️🧿 🐐 🇮🇳 #INDVSSAODI https://t.co/osWQrTfJ2R
— Yuzvendra Chahal (@yuzi_chahal) November 30, 2025







