ಲಕ್ಷ್ಯ ಸೇನ್ ಗೆ ಆಸ್ಟ್ರೇಲಿಯನ್ ಓಪನ್ ಕಿರೀಟ

Photo credit: X/@TheKhelIndia
ಸಿಡ್ನಿ: ಆಸ್ಟ್ರೇಲಿಯನ್ ಓಪನ್ ಸೂಪರ್ 500 ಟೂರ್ನಮೆಂಟ್ ನಲ್ಲಿ ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿದ ವಿಶ್ವದ 14ನೇ ಶ್ರೇಯಾಂಕಿತ ಆಟಗಾರ ಲಕ್ಷ್ಯ ಸೇನ್, ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಜಪಾನ್ ನ ಯುಶಿ ತನಾಕರನ್ನು 21-15, 21-11 ನೇರ ಸೆಟ್ ಗಳಲ್ಲಿ ಪರಾಭವಗೊಳಿಸುವ ಮೂಲಕ, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ತಮಗಿಂತ ಕಡಿಮೆ ಶ್ರೇಯಾಂಕಿತ ಆಟಗಾರರಾದ ಯುಶಿ ತನಾಕರನ್ನು ಕೇವಲ 35 ನಿಮಿಷಗಳಲ್ಲಿ ಮಣಿಸಿದ ಲಕ್ಷ್ಯ ಸೇನ್, ತಮ್ಮ ತೀಕ್ಷ್ಣ ಹೊಡೆತಗಳ ಮೂಲಕ ಆರಂಭದಿಂದಲೇ ತಮ್ಮ ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಿದರು.
ಶನಿವಾರ ಮಧ್ಯಾಹ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎರಡನೆ ಶ್ರೇಯಾಂಕಿತ ಆಟಗಾರರಾದ ಚೀನಾದ ಚೌ ತಿಯೆನ್ ಚೆನ್ ರನ್ನು 86 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ಲಕ್ಷ್ಯ ಸೇನ್ ಪರಾಭವಗೊಳಿಸಿದ್ದರು. ಇದರಿಂದ ಅವರು ಕೊಂಚ ದಣಿದಿರುವಂತೆಯೂ ಕಂಡು ಬಂದರು.
ಆದರೆ ಫೈನಲ್ ನಲ್ಲಿ ಲಕ್ಷ್ಯ ಸೇನ್, ಆರಂಭದಿಂದಲೇ ತೀಕ್ಷ್ಣ ಹೊಡೆತಗಳ ಮೂಲಕ ತಮ್ಮ ಪ್ರತಿಸ್ಪರ್ಧಿ ಯುಶಿ ತನಾಕರ ಧೃತಿಗೆಡಿಸಿದರು.





