ಲ್ಯಾಂಡೊ ನೊರೀಸ್ ವಿಶ್ವಚಾಂಪಿಯನ್: 17 ವರ್ಷಗಳ ಪ್ರಶಸ್ತಿ ಬರದಿಂದ ಹೊರಬಂದ ಮೆಕ್ಲರೇನ್

PC | ndtv
ಅಬುದಾಬಿ: ಮೆಕ್ಲರೇನ್ ತಂಡದ ಲ್ಯಾಂಡೊ ನೊರೇಸ್ ವೃತ್ತಿಜೀವನದ ಮೊಟ್ಟಮೊದಲ ಫಾಮ್ರ್ಯುಲಾ 1 ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿದ್ದಾರೆ. ಸೀಸನ್ನ ಕೊನೆಯ ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಭಾನುವಾರ ಈ ಕನಸಿನ ಸಾಧನೆಮಾಡಿದರು.
ಅಂತಿಮ ದಿನ ಪ್ರಶಸ್ತಿಗಾಗಿ ತ್ರಿಕೋನ ಪೈಪೋಟಿ ಇತ್ತು. ತಂಡದ ಸಹ ಆಟಗಾರ ಆಸ್ಕರ್ ಪಿಯಾಸ್ಟ್ರಿ ಮತ್ತು ನಾಲ್ಕು ಬಾರಿಯ ವಿಶ್ವಚಾಂಪಿಯನ್ ಮ್ಯಾಕ್ಸ್ ವೆಸ್ರ್ಟೆಪ್ಪೆನ್ ರೇಸ್ನಲ್ಲಿದ್ದರು. 12 ಅಂಕಗಳ ಮುನ್ನಡೆಯೊಂದಿಗೆ ಅಬುಧಾಬಿಗೆ ಆಗಮಿಸಿದ್ದ 26 ವರ್ಷದ ರೇಸರ್ ಅವರಿಂದ ಕಠಿಣ ಸ್ಪರ್ಧೆ ಎದುರಿಸಬೇಕಾಗಿತ್ತು. ಮೂರನೇ ರೇಸ್ ಗೆದ್ದರೂ ವೆಸ್ರ್ಟೆಪ್ಪೆನ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಪೈಸ್ಟ್ರಿ ಮೂರನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದರು. 2008ರಲ್ಲಿ ಲೆವೀಸ್ ಹ್ಯಾಮಿಲ್ಟನ್ ಪ್ರಶಸ್ತಿ ಗೆದ್ದ ಬಳಿಕ ಮೆಕ್ಲರೇನ್ ಗೆ ಪ್ರಶಸ್ತಿ ಗೆದ್ದುಕೊಟ್ಟ ಮೊಟ್ಟಮೊದಲ ಚಾಲಕ ಎಂಬ ಹೆಗ್ಗಳಿಕೆಗೆ ನೋರಿಸ್ ಪಾತ್ರರಾದರು.
ಇದರೊಂದಿಗೆ ಮೆಕ್ಲರೇನ್ ತಂಡದ 17 ವರ್ಷಗಳ ಪ್ರಶಸ್ತಿಯ ಬರ ನೀಗಿದಂತಾಯಿತು.





