ಭಾರತ ತಂಡದ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯ; ಇಂಗ್ಲೆಂಡ್ ತಂಡ ಸೇರಿದ ಬ್ರೆಂಡನ್ ಕಾರ್ಸ್

ಲಂಡನ್, ಜು. 15: ಭಾರತ ಕ್ರಿಕೆಟ್ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಇನ್ನೆರಡು ಪಂದ್ಯಗಳಿಗೆ ಬ್ರೆಂಡನ್ ಕಾರ್ಸ್ ಅವರು ಇಂಗ್ಲೆಂಡ್ ತಂಡವನ್ನು ಸೇರಿದ್ದಾರೆ.
ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ 30ರ ಹರೆಯದ ವೇಗದ ಬೌಲರ್ ಕಾರ್ಸ್ ಅವರನ್ನು ಜುಲೈ 14ರಂದು (ಮಂಗಳವಾರ) ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ.
ಕಾರ್ಸ್ ಅವರ ಸೇರ್ಪಡೆಯು ಭಾರತ ತಂಡದ ವಿರುದ್ಧದ ಸರಣಿಯ ಇನ್ನೆರಡು ಪಂದ್ಯಗಳಿಗಿಂತ ಮೊದಲು ಇಂಗ್ಲೆಂಡ್ ತಂಡದ ವೇಗದ ದಾಳಿಯನ್ನು ಬಲಿಷ್ಠಗೊಳಿಸಿದೆ.
2026ರ ಐಪಿಎಲ್ ಆರಂಭಕ್ಕಿಂತ ಮೊದಲು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ನೆಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಕಾರ್ಸ್ ಅವರಿಗೆ ಮೊಣಕೈಗೆ ಗಾಯವಾಗಿತ್ತು. ಹಲವು ತಿಂಗಳ ಕಾಲ ಸಕ್ರಿಯ ಕ್ರಿಕೆಟ್ ನಿಂದ ದೂರವಿದ್ದ ಕಾರ್ಸ್ ಇದೀಗ ತಂಡಕ್ಕೆ ವಾಪಸಾಗಿದ್ದಾರೆ.
2025ರ ನವೆಂಬರ್ ನಂತರ ಮೊದಲ ಬಾರಿಗೆ ಕಾರ್ಸ್ ಅವರು ಇಂಗ್ಲೆಂಡ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Next Story




