AITA ಅಧ್ಯಕ್ಷ ಸ್ಥಾನಕ್ಕೆ ಲಿಯಾಂಡರ್ ಪೇಸ್ ಸ್ಪರ್ಧೆ?

ಲಿಯಾಂಡರ್ ಪೇಸ್ | Photo Credit : PTI
ಕೋಲ್ಕತಾ, ಸೆ. 7: ಅಖಿಲ ಭಾರತ ಟೆನಿಸ್ ಸಂಸ್ಥೆಯ (AITA) ಅಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿ, ಟೆನಿಸ್ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿರುವ ಲಿಯಾಂಡರ್ ಪೇಸ್ ಅವರನ್ನು ಬೆಂಬಲಿಸಲು ಬಂಗಾಳ ಟೆನಿಸ್ ಸಂಸ್ಥೆ (BTA) ನಿರ್ಧರಿಸಿದೆ.
BTA ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಮೆರಿಕದಲ್ಲಿ ನಡೆದ ರೋಜರ್ ಫೆಡರರ್ ಅವರ ಟೆನಿಸ್ ಹಾಲ್ ಆಫ್ ಫೇಮ್ ಸಮಾರಂಭದಲ್ಲಿ ಭಾಗವಹಿಸಿದ್ದ ಪೇಸ್, ಈ ಪ್ರಸ್ತಾವವನ್ನು ಒಪ್ಪಿಕೊಂಡಿರುವಂತೆ ತೋರುತ್ತಿದ್ದು, AITA ಚುನಾವಣಾ ಅಧಿಸೂಚನೆ ಅಧಿಕೃತವಾಗಿ ಪ್ರಕಟವಾದ ತಕ್ಷಣ ತಮ್ಮ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ. ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಮರಳಿದ ಬಳಿಕ ಪೇಸ್ ಈ ವಿಷಯದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.
AITAಯ ‘ಅತ್ಯುನ್ನತ ಅರ್ಹತೆಯ ಕ್ರೀಡಾಪಟುಗಳ’ ಪಟ್ಟಿಗೆ ಸೇರ್ಪಡೆಗೊಳ್ಳಲು ಪೇಸ್ ಅಧಿಕೃತವಾಗಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ BTA ಈ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಫೆಡರೇಶನ್ನ ಇತ್ತೀಚೆಗೆ ತಿದ್ದುಪಡಿ ಮಾಡಲಾದ ಸಂವಿಧಾನದ ಅಡಿಯಲ್ಲಿ, ಅಧ್ಯಕ್ಷ ಹುದ್ದೆಯ ಉಮೇದುವಾರಿಕೆಗೆ ಈ ಅರ್ಜಿ ಮಹತ್ವದ ಹೆಜ್ಜೆಯಾಗಿದೆ. ಅವರು 2025ರ ನವೆಂಬರ್ನಲ್ಲಿ BTA ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.




