ಖ್ಯಾತ ಫುಟ್ಬಾಲ್ ಆಟಗಾರ ಡಿಯೋಗೊ ಜೋಟಾ ರಸ್ತೆ ಅಪಘಾತದಲ್ಲಿ ಮೃತ್ಯು

ಡಿಯೋಗೊ ಜೋಟಾ (Photo credit: X/@DiogoJota18)
ಮ್ಯಾಡ್ರಿಡ್ : ಪೋರ್ಚುಗಲ್, ಲಿವರ್ಪೂಲ್ ಫುಟ್ಬಾಲ್ ತಂಡದ ಫಾರ್ವಾರ್ಡ್ ಆಟಗಾರ ಡಿಯೋಗೊ ಜೋಟಾ ಮತ್ತು ಅವರ ಸಹೋದರ ಸ್ಪೇನ್ನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಡಿಯೋಗೊ ಜೋಟಾ(28) ಮತ್ತು ಸಹೋದರ ಆಂಡ್ರೆ ಸಿಲ್ವಾ(25)ಇಬ್ಬರೂ ಸ್ಪೇನ್ನ ಪಶ್ಚಿಮ ನಗರದ ಝಮೊರಾ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.
ಪೋರ್ಚುಗಲ್ನ ಗಡಿಗೆ ಸಮೀಪವಿರುವ ವಾಯುವ್ಯ ಸ್ಪೇನ್ನ ಝಮೊರಾ ಬಳಿಯ ಸೆರ್ನಾಡಿಲ್ಲಾದಲ್ಲಿ ಓವರ್ಟೇಕ್ ಮಾಡುವಾಗ ಕಾರಿನ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಕುರಿತು ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಜೋಟಾ ಕೇವಲ 10 ದಿನಗಳ ಹಿಂದೆ ರೂಟ್ ಕಾರ್ಡೋಸೊ ಅವರನ್ನು ವಿವಾಹವಾಗಿದ್ದರು.
Next Story





