ಲಾರ್ಡ್ಸ್ ಟೆಸ್ಟ್: ಗಿಲ್ ನಂತೆಯೇ ಔಟ್ ಆಗಿದ್ದ ಕೊಹ್ಲಿ!

PC: x.com/IMManu_18
ಲಾರ್ಡ್ಸ್: ಕ್ರಿಕೆಟ್ ನಲ್ಲಿ ಹಲವು ಕುತೂಲಾರಿ ಅಂಶಗಳು ಭಿನ್ನ ಕ್ಷಣಗಳ ನಡುವೆ ಸಂಬಂಧ ಕಲ್ಪಿಸುತ್ತವೆ. ಅತಿಥೇಯ ಇಂಗ್ಲೆಂಡ್ ತಂಡದ ವಿರುದ್ಧದ ಲಾರ್ಡ್ಸ್ ಟೆಸ್ಟ್ ನಲ್ಲಿ ಶುಕ್ರವಾರ ಶುಭ್ ಮನ್ ಗಿಲ್ ಕೇವಲ 16 ರನ್ ಗೆ ಔಟ್ ಆದರು. ಕ್ರಿಸ್ ವೋಕ್ಸ್ ಅವರ ಎಸೆತ, ಗಿಲ್ ಬ್ಯಾಟ್ ನ ತುದಿಗೆ ಸವರಿಕೊಂಡು ವಿಕೆಟ್ ಕೀಪರ್ ಕೈಸೇರಿತು. ಗಿಲ್ ಕ್ರೀಸ್ ನ ಹೊರಗೆ ಬ್ಯಾಟ್ ಮಾಡುವ ಇರಾದೆ ಹೊಂದಿದ್ದನ್ನು ಗಮನಿಸಿದ ಇಂಗ್ಲೆಂಡ್ ಈ ಸೊಗಸಾದ ತಂತ್ರ ಹೆಣೆದಿತ್ತು. ಇದು ಇತಿಹಾಸವನ್ನು ಪರಿಶೀಲಿಸುವ ವರೆಗೂ ಒಂದು ಸಾಮಾನ್ಯ ಘಟನೆ ಎನಿಸಿತ್ತು!
ಹದಿಮೂರು ವರ್ಷಗಳ ಹಿಂದೆ ಅಂದರೆ 2011ರ ಸೆಪ್ಟೆಂಬರ್ ನಲ್ಲಿ, ಯುವ ಆಟಗಾರ ವಿರಾಟ್ ಕೊಹ್ಲಿ ಲಾರ್ಡ್ಸ್ ನಲ್ಲಿ ಪ್ರಥಮ ಏಕದಿನ ಪಂದ್ಯ ಆಡುತ್ತಿದ್ದರು. ಅವರು ಕೂಡಾ 16 ರನ್ ಗಳಿಸಿದ್ದಾಗ, ವಿಕೆಟ್ ಕೀಪರ್ ಹಿಡಿದ ಕ್ಯಾಚ್ ಗೆ ಬಲಿಯಾಗಿದ್ದರು.
ಎರಡೂ ಹೊಡೆತಗಳು ತಿಂಗಳ 11ನೇ ದಿನದಂದು ನಡೆದಿತ್ತು ಎನ್ನುವುದು ಗಮನಾರ್ಹ. ಅಂತೆಯೇ ಇಬ್ಬರೂ ಆಟಗಾರರು 16 ರನ್ ಗಳಿಸಿದ್ದರು. ಇಬ್ಬರೂ ಆಟಗಾರರು ತಮ್ಮ ವೃತ್ತಿಜೀವನದ ವಿವಿಧ ಹಂತಗಳಲ್ಲಿದ್ದರು. ಇಬ್ಬರೂ ಒಂದೇ ತರದ ಚಪ್ಪಾಳೆಯನ್ನೂ ಸಂಪಾದಸಿದರು. ಕೊಹ್ಲಿ ಇಂಗ್ಲೆಂಡ್ ನಲ್ಲಿ ಆಗಷ್ಟೇ ವೃತ್ತಿಜೀವನ ಆರಂಭಿಸಿದ್ದರೆ, ಅತ್ಯುತ್ತಮ ಫಾರ್ಮ್ ನಲ್ಲಿರುವ ಗಿಲ್ ಲಾರ್ಡ್ಸ್ ನಲ್ಲಿ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದಾರೆ.
ಆದರೆ ಕೊಹ್ಲಿ ಏಕದಿನ ಪಂದ್ಯ ಆಡಿದ್ದರೆ, ಗಿಲ್ ಟೆಸ್ಟ್ ಪಂದ್ಯ ಆಡುತ್ತಿರುವುದು ಮಾತ್ರ ಭಿನ್ನ ಅಂಶ. ಆದರೂ ಎರಡೂ ಘಟನೆಗಳ ನಡುವಿನ ಸಾಮ್ಯತೆಯನ್ನು ಕಡೆಗಣಿಸುವಂತಿಲ್ಲ.
ಇದಕ್ಕೂ ಮುನ್ನ ಜಸ್ ಪ್ರೀತ್ ಬೂಮ್ರಾ ಐದು ವಿಕೆಟ್ ಗೊಂಚಲು ಗಳಿಸುವ ಮೂಲಕ ಇಂಗ್ಲೆಂಡ್ ಇನಿಂಗ್ಸನ್ನು 387 ರನ್ ಗೆ ಮೊಟಕುಗೊಳಿಸಿದರು. ಜೋ ರೂಟ್ ಲಾರ್ಡ್ಸ್ ನಲ್ಲಿ ತಮ್ಮ ಎಂಟನೇ ಶತಕ ದಾಖಲಿಸಿದರೆ, ಜಿಮ್ಮಿ ಸ್ಮಿತ್ ಮತ್ತು ಬ್ರಿಂಡನ್ ಕಾರ್ಸ್ ಕೆಳಕ್ರಮಾಂಕದಲ್ಲಿ ಉಪಯುಕ್ತ ಕೊಡುಗೆ ನೀಡಿದರು. ಇದಕ್ಕೆ ಉತ್ತರವಾಗಿ ಎರಡನೇ ದಿನದ ಅಂತಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದ್ದು, ಕೆ.ಎಲ್.ರಾಹುಲ್ ಅಜೇಯ 58 ರನ್ ಗಳಿಸಿದ್ದಾರೆ. ಜೈಸ್ವಾಲ್ ಹಾಗೂ ಕರುಣ್ ನಾಯರ್ ಉತ್ತಮವಾಗಿ ಬ್ಯಾಟಿಂಗ್ ಆರಂಭಿಸಿದರೂ, ಅದನ್ನು ಉಳಿಸಿಕೊಳ್ಳಲು ವಿಫಲರಾದರು. ಇಂಗ್ಲೆಂಡ್ ಹೆಣೆದ ಒಳ್ಳೆಯ ತಂತ್ರಕ್ಕೆ ಗಿಲ್ ವಿಕೆಟ್ ಒಪ್ಪಿಸಿದರು.







