ಮಹಾರಾಜ ಟಿ20 ಟ್ರೋಫಿ: 3 ಸೂಪರ್ ಓವರ್ಗಳ ನಂತರ ಪಂದ್ಯ ಗೆದ್ದ ಹುಬ್ಬಳ್ಳಿ ಟೈಗರ್ಸ್

PC : ANI
ಬೆಂಗಳೂರು, ಆ.23: ಅತ್ಯಂತ ರೋಚಕವಾಗಿ ನಡೆದ ಮಹಾರಾಜ ಟಿ-20 ಟ್ರೋಫಿಯ 17ನೇ ಪಂದ್ಯದಲ್ಲಿ ವಿಜೇತ ತಂಡವನ್ನು ನಿರ್ಧರಿಸಲು ಮೂರು ಬಾರಿ ಸೂಪರ್ ಓವರ್ ಮೊರೆ ಹೋಗಲಾಗಿದ್ದು ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ ತಂಡ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯಶಾಲಿಯಾಯಿತು.
ಬೆಂಗಳೂರು ತಂಡಕ್ಕೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ ಆರು ರನ್ ಅಗತ್ಯವಿತ್ತು. ಮೂರು ವಿಕೆಟ್ ಕೈಯಲ್ಲಿತ್ತು. ಆದರೆ 164 ರನ್ ಗಳಿಸಿದ ಬೆಂಗಳೂರು ತಂಡ ಪಂದ್ಯವನ್ನು ಟೈ ಮಾಡಿಕೊಂಡಿತು. ಎಲ್ಆರ್ ಕುಮಾರ್ ಎಸೆದ 20ನೇ ಓವರ್ನ ಮೊದಲ ಎಸೆತವನ್ನು ನವೀನ್(23 ರನ್) ಬೌಂಡರಿಗೆ ಅಟ್ಟಿದರು. ಆದರೆ ಮುಂದಿನ ಎಸೆತಕ್ಕೆ ಔಟಾದರು. ಹೊಸ ಬ್ಯಾಟರ್ ಲವಿಶ್ ಕೌಶಲ್ 5ನೇ ಎಸೆತದಲ್ಲಿ ಔಟ್ ಆಗುವ ಮೊದಲು ಎರಡು ಡಾಟ್ ಬಾಲ್ ಆಡಿದರು. ಆಗ ಅಂತಿಮ ಎಸೆತದಲ್ಲಿ ಗೆಲುವಿಗೆ 1 ರನ್ ಅಗತ್ಯವಿತ್ತು. ಆಗ ಕ್ರಾಂತಿ ಕುಮಾರ್ ರನೌಟಾದರು. ಆಗ ಪಂದ್ಯದ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಅಳವಡಿಸಲಾಯಿತು.
ಮೊದಲ ಸೂಪರ್ ಓವರ್ನಲ್ಲಿ ಬೆಂಗಳೂರು 10 ರನ್ ಗಳಿಸಿತು. ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಕೊನೆಯ 3 ಎಸೆತಗಳಲ್ಲಿ 8 ರನ್ ಅಗತ್ಯವಿದ್ದಾಗ ಮನೀಶ್ ಪಾಂಡೆ ಸಿಕ್ಸರ್ ಸಿಡಿಸಿದರು. 10 ರನ್ ಗಳಿಸಿದ ಹುಬ್ಬಳ್ಳಿ ಪಂದ್ಯ ಟೈನಲ್ಲಿ ಕೊನೆಗೊಳಿಸಿತು.
2ನೇ ಸೂಪರ್ ಓವರ್ನಲ್ಲಿ ಹುಬ್ಬಳ್ಳಿ ಮೊದಲು ಬ್ಯಾಟ್ ಮಾಡಿ 8 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೆಂಗಳೂರು 1 ವಿಕೆಟ್ಗೆ 8 ರನ್ ಗಳಿಸಿ ಮತ್ತೊಮ್ಮೆ ಟೈಗೊಳಿಸಿತು.
3ನೇ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು 1 ವಿಕೆಟ್ಗೆ 12 ರನ್ ಗಳಿಸಿತು. ಈ ಬಾರಿ ಹುಬ್ಬಳ್ಳಿ ತಂಡ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿ ಜಯಭೇರಿ ಬಾರಿಸಿತು. ಮನ್ವಂತ್ ಕುಮಾರ್ ಔಟಾಗದೆ 11 ರನ್ ಗಳಿಸಿದರು.
THREE SUPER OVER IN A T20 MATCH.
— Johns. (@CricCrazyJohns) August 23, 2024
- History created at Maharaja Trophy....!!!! pic.twitter.com/maMyclQ10A