ಮಹಾರಾಜ ಟ್ರೋಫಿ ಟಿ-20: ಮೈಸೂರು ವಾರಿಯರ್ಸ್ ತಂಡ ಪ್ರಕಟ
ಮುಖ್ಯ ಕೋಚ್ ಆಗಿ ಮುರಳೀಧರ್, ನಾಯಕನಾಗಿ ಕರುಣ್ ನಾಯರ್ ನೇಮಕ

ಬೆಂಗಳೂರು: ಎನ್ ಆರ್ ಗ್ರೂಪ್ ಒಡೆತನದ ಮೈಸೂರು ವಾರಿಯರ್ಸ್ ಮುಂಬರುವ 2023ರ ಮಹಾರಾಜ ಟ್ರೋಫಿ ಟಿ-20 ಪಂದ್ಯಾವಳಿಗೆ ತನ್ನ ತಂಡವನ್ನು ಪ್ರಕಟಿಸಿದೆ. ಈ ಸರಣಿಯನ್ನು ಈ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್ ಎಂದು ಕರೆಯಲಾಗುತ್ತಿತ್ತು. ಪಂದ್ಯಾವಳಿಯು ಬೆಂಗಳೂರಿನಲ್ಲಿ ನಡೆಯಲಿದ್ದು, ಆಗಸ್ಟ್ 13 ರಿಂದ ಆರಂಭವಾಗಿ ಆಗಸ್ಟ್ 29 ರಂದು ಮುಕ್ತಾಯಗೊಳ್ಳಲಿದೆ
ಕರುಣ್ ನಾಯರ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ಪ್ರಸಿದ್ಧ ಕೃಷ್ಣ, ಸುಚಿತ್ ಜೆ, ಸಮರ್ಥ ಆರ್, ಮನೋಜ್ ಭಾಂಡಗೆ, ಕಾರ್ತಿಕ್ ಸಿ .ಎ, ಶೋಯೆಬ್ ಮ್ಯಾನೇಜರ್, ರಕ್ಷಿತ್ ಎಸ್. ವೆಂಕಟೇಶ್ ಎಂ. ಕುಶಾಲ್ ವಾಧ್ವಾನಿ, ಭರತ್ ಧುರಿ, ಮೊನಿಶ್ ರೆಡ್ಡಿ, ತುಷಾರ್ ಸಿಂಗ್, ಶ್ರೀಶಾ ಎಸ್. ಆಚಾರ್, ರಾಹುಲ್ ಇದ್ದಾರೆ. ಸಿಂಗ್ ರಾವತ್, ಶಶಿಕುಮಾರ್ ಕೆ, ಆದಿತ್ಯ ಮಣಿ, ಗೌತಮ್ ಮಿಶ್ರಾ, ಲಂಕೇಶ್ ಹಾಗೂ ಗೌತಮ್ ಸಾಗರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಲಂಕೇಶ್ ಮತ್ತು ಗೌತಮ್ ಸಾಗರ್ ಟ್ಯಾಲೆಂಟ್ ಹಂಟ್ನಿಂದ ಆಯ್ಕೆಯಾದ ಇಬ್ಬರು ಆಟಗಾರರು. ತಂಡದ ಮುಖ್ಯ ತರಬೇತುದಾರನ ಸ್ಥಾನವನ್ನು ಸಹ ಅಂತಿಮಗೊಳಿಸಲಾಗಿದ್ದು, ಈ ಹಿಂದೆ ಆರ್ ಸಿಬಿಗೆ ಬ್ಯಾಟಿಂಗ್ ಕೋಚ್ ಆಗಿದ್ದ ಆರ್.ಎಕ್ಸ್. ಮುರಳೀಧರ್ ನೇಮಕಗೊಂಡಿದ್ದಾರೆ. ಇವರ ನೇತೃತ್ವದಲ್ಲಿಯೇ ಟ್ಯಾಲೆಂಟ್ ಹಂಟ್ನಿಂದ ಇಬ್ಬರು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ತಂಡವು ಸಹಾಯಕ ತರಬೇತುದಾರರಾಗಿ ವಿಜಯ್ ಮಡ್ಯಾಳ್ಕರ್, ಬೌಲಿಂಗ್ ಕೋಚ್ ಆಗಿ ಆದಿತ್ಯ ಸಾಗರ್, ಫಿಸಿಯೋಥೆರಪಿಸ್ಟ್ ಆಗಿ ಶ್ರೀರಂಗ ಅವರನ್ನು ಒಳಗೊಂಡಿದೆ.





