ಯುರೋಪಿಯನ್ ರೇಸ್ ವಾಕಿಂಗ್ ಟೀಮ್ ಚಾಂಪಿಯನ್ಶಿಪ್ಸ್ | 35 ಕಿ.ಮೀ. ವೇಗದ ನಡಿಗೆಯಲ್ಲಿ ಮಸ್ಸಿಮೊ ಸ್ಟಾನೊ ವಿಶ್ವ ದಾಖಲೆ

ಮಸ್ಸಿಮೊ ಸ್ಟಾನೊ | PC : X \ @WorldAthletics
ಪೊಡೆಬ್ರಡಿ (ಝೆಕ್ ರಿಪಬ್ಲಿಕ್): ಝೆಕ್ ರಿಪಬ್ಲಿಕ್ ನ ಪೊಡೆಬ್ರಡಿಯಲ್ಲಿ ನಡೆಯುತ್ತಿರುವ ಯುರೋಪಿಯನ್ ರೇಸ್ ವಾಕಿಂಗ್ ಟೀಮ್ ಚಾಂಪಿಯನ್ಶಿಪ್ಸ್ನಲ್ಲಿ ರವಿವಾರಮಾಜಿ ವಿಶ್ವ ಚಾಂಪಿಯನ್ ಇಟಲಿಯ ಮಸ್ಸಿಮೊ ಸ್ಟಾನೊ 35 ಕಿ.ಮೀ. ವೇಗದ ನಡಿಗೆಯಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
33 ವರ್ಷದ ಸ್ಟಾನೊ 2 ಗಂಟೆ 20 ನಿಮಿಷ 43 ಸೆಕೆಂಡ್ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಇದರೊಂದಿಗೆ ಅವರು ಈ ಹಿಂದಿನ ದಾಖಲೆಯನ್ನು 57 ಸೆಕೆಂಡ್ಗಳ ಭರ್ಜರಿ ಅಂತರದಿಂದ ಮುರಿದರು. ಈ ಹಿಂದಿನ ದಾಖಲೆಯು ಕೆನಡದ ಇವಾನ್ ಡನ್ಫೀ ಹೆಸರಿನಲ್ಲಿತ್ತು. ಅವರು ಮಾರ್ಚ್ನಲ್ಲಿ 2 ಗಂಟೆ 21 ನಿಮಿಷ 40 ಸೆಕೆಂಡ್ಗಳಿಂದ ಈ ದಾಖಲೆಯನ್ನು ನಿರ್ಮಿಸಿದ್ದರು.
ಸ್ಟಾನೊ 35 ಕಿ.ಮೀ. ರೇಸ್ ವಾಕ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಆಗಿದ್ದಾರೆ. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಅವರು ಪುರುಷರ 20 ಕಿ.ಮೀ. ರೇಸ್ವಾಕ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಮಹಿಳೆಯರ 35 ಕಿ.ಮೀ. ರೇಸ್ವಾಕ್ನಲ್ಲಿ ಸ್ಪೇನ್ನ ಮರಿಯಾ ಪೆರೆಝ್ 2 ಗಂಟೆ 38 ನಿಮಿಷ 59 ಸೆಕೆಂಡ್ನೊಂದಿಗೆ ಚಿನ್ನದ ಪದಕ ಗೆದ್ದರು.
World record
— World Athletics (@WorldAthletics) May 18, 2025
's Massimo Stano smashes the 35km race walk world record in Podebrady with 2:20:43
FLASH report https://t.co/yzvaVECL93 pic.twitter.com/aKCgl6iZY9







