ಮ್ಯಾಕ್ಸ್ ವೆಲ್ ಸ್ಫೋಟಕ ದ್ವಿಶತಕ ಯುವ ಪೀಳಿಗೆಯ ಕ್ರಿಕೆಟಿಗರಿಗೆ ಸ್ಫೂರ್ತಿ: ಮೆಕ್ಡೊನಾಲ್ಡ್

Photo- PTI
ಹೊಸದಿಲ್ಲಿ: ಅಫ್ಘಾನಿಸ್ತಾನದ ವಿರುದ್ಧ ಸೋಮವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಸ್ಫೋಟಕ ದ್ವಿಶತಕವು ಹೊಸ ಪೀಳಿಗೆಯ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡುತ್ತದೆ ಎಂದು ಆಸ್ಟ್ರೇಲಿಯದ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಅಭಿಪ್ರಾಯಪಟ್ಟರು.
ಇನಿಂಗ್ಸ್ ನ ಕೊನೆಯ ಭಾಗದಲ್ಲಿ ಸ್ನಾಯು ಸೆಳೆತ ಹಾಗೂ ಬೆನ್ನುನೋವನ್ನು ಎದುರಿಸುತ್ತಿದ್ದರೂ ನೋವು ನುಂಗಿ ಏಕಾಂಗಿ ಪ್ರದರ್ಶನ ನೀಡಿದ್ದ ಮ್ಯಾಕ್ಸ್ ವೆಲ್ 128 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 21 ಬೌಂಡರಿಗಳನ್ನು ಬಾರಿಸಿ ಅಜೇಯ 201 ರನ್ ಗಳಿಸಿ ಶ್ರೇಷ್ಠ ಇನಿಂಗ್ಸ್ ಆಡಿದ್ದರು.
ಇಂತಹ ಇನಿಂಗ್ಸ್ ಮೀರಿಸಲು ಬಹಳ ಸಮಯ ತೆಗೆದುಕೊಳ್ಳಬಹುದು. ನಾಯಕ ಪ್ಯಾಟ್ ಕಮಿನ್ಸ್ ಹೇಳಿದಂತೆ ಇದೊಂದು ಶ್ರೇಷ್ಠ ಏಕದಿನ ಇನಿಂಗ್ಸ್ ಆಗಿದೆ. ಇಂತಹ ಅದ್ಭುತ ಆಟದ ಮೂಲಕ ಮ್ಯಾಕ್ಸ್ ವೆಲ್ ಹೊಸ ಪೀಳಿಗೆಗೆ ಸ್ಫೂರ್ತಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಮೆಕ್ಡೊನಾಲ್ಡ್ ಹೇಳಿದರು.
Next Story





