ಧನ ಸಂಗ್ರಹಿಸದ ಪ್ರಾಯೋಜಕರು; ಕೇರಳದಲ್ಲಿ ಅರ್ಜೆಂಟೀನಾ ಆಟ ಅನುಮಾನ
ಕೇರಳದಲ್ಲಿ ಆಯೋಜಕರು - ಪ್ರಾಯೋಜಕರ ನಡುವೆ 'ಮೆಸ್ಸಿ ಫುಟ್ಬಾಲ್' ಜಗಳ

ಲಿಯೋನೆಲ್ ಮೆಸ್ಸಿ (Photo credit: PTI)
ಕೊಚ್ಚಿ: ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫುಟ್ಬಾಲ್ ತಂಡದ ಕೇರಳ ಭೇಟಿ ಗೊಂದಲಮಯವಾಗಿದೆ.
ವಿಶ್ವ ಚಾಂಪಿಯನ್ ತಂಡವು ಕೇರಳದಲ್ಲಿ ಸ್ನೇಹಪರ ಪಂದ್ಯಗಳನ್ನು ಆಡಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ನಂತರ ಮೌನವಾಗಿತ್ತು. ಈಗ ಅನಿಶ್ಚಿತತೆಯಿಂದ ಪಂದ್ಯ ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ. ಸರ್ಕಾರ, ಸಂಘಟಕರು ಮತ್ತು ಪ್ರಾಯೋಜಕರು ಈಗ ಪರಸ್ಪರ ಬಹುತೇಕ ಕೈ ತಪ್ಪಿರುವ ಪಂದ್ಯಾಟದ ಬಗ್ಗೆ ಮಾತನಾಡುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅರ್ಜೆಂಟೀನಾ ತಂಡವು ಅಂತರರಾಷ್ಟ್ರೀಯ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಈ ವೇಳಾಪಟ್ಟಿಯಲ್ಲಿ ಕೇರಳದಲ್ಲಿ ಆಡುವ ಯಾವುದೇ ಸ್ನೇಹಪರ ಪಂದ್ಯದ ಉಲ್ಲೇಖ ಇರಲಿಲ್ಲ. ಇದು ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ.
ಕೇರಳದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಅವರು ಹೇಳಲು ಏನೂ ಇಲ್ಲ ಎಂದು ಹೇಳಿಕೊಂಡು ಪ್ರಾಯೋಜಕರ ಮೇಲೆ ಜವಾಬ್ದಾರಿಯನ್ನು ವರ್ಗಾಯಿಸಿದರು. ಪಂದ್ಯದ ಪ್ರಾಯೋಜಕತ್ವಕ್ಕಾಗಿ 70 ಕೋಟಿ ರೂ.ಗಳ ಹಣವನ್ನು ಸಂಗ್ರಹಿಸಲು ಸಾಧ್ಯವಾಗದಿರುವುದು ಪಂದ್ಯಾಟ ನಡೆಯುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು The New Indian Express ವರದಿ ಮಾಡಿತ್ತು.
ಶನಿವಾರ, ಸಚಿವರು ವಿರೋಧಾತ್ಮಕ ಹೇಳಿಕೆಗಳನ್ನು ನೀಡುವುದರೊಂದಿಗೆ ವಿಷಯವು ಮತ್ತೊಂದು ವಿಚಿತ್ರ ತಿರುವು ಪಡೆದುಕೊಂಡಿತು - ಆರಂಭದಲ್ಲಿ ಮೆಸ್ಸಿ ಮತ್ತು ತಂಡದ ಭಾರತ ಭೇಟಿಯನ್ನು ತಪ್ಪಿಸುತ್ತದೆ ಎಂದು ಹೇಳಲಾಯಿತು, ನಂತರ ಎಲ್ಲವೂ ಚೆನ್ನಾಗಿದೆ ಮತ್ತು ತಂಡವು ತಿರುವನಂತಪುರದಲ್ಲಿ ಪಂದ್ಯಗಳನ್ನು ಆಡುತ್ತದೆ ಎಂದು ಹೇಳಲಾಯಿತು.
ಆರಂಭದಲ್ಲಿ ಮೆಸ್ಸಿ ಮತ್ತು ತಂಡವು ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ಹೇಳಿದ್ದ ಕೇರಳ ಕ್ರೀಡಾ ಸಚಿವ ವಿ. ಅಬ್ದುಲ್ ರಹಮಾನ್, ಬಳಿಕ ತಂಡವು ಕೇರಳದಲ್ಲಿ ಸ್ನೇಹಪರ ಪಂದ್ಯ ಆಡಲಿದೆ ಎಂದು ಹೇಳಿದ್ದರು. ಆದರೆ ಶನಿವಾರ ಸಚಿವರ ಹೇಳಿಕೆಯು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು.
"ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ತನ್ನ ಪಾತ್ರವನ್ನು ನಿರ್ವಹಿಸಿದೆ. ಪ್ರಾಯೋಜಕರು ಪಾವತಿ ಮಾಡುವುದಾಗಿ ನಮಗೆ ತಿಳಿಸಿದ್ದಾರೆ. ಪಂದ್ಯಾಟ ವಿಳಂಬವಾಬಹುದು" ಎಂದು ಎಂದು ಅಬ್ದುರಹಿಮಾನ್ ಮಾಧ್ಯಮಗಳಿಗೆ ಭರವಸೆ ನೀಡಿದರು.
ಈ ಮಧ್ಯೆ ಆಲ್ ಕೇರಳ ಗೋಲ್ಡ್ ಅಂಡ್ ಸಿಲ್ವರ್ ಮರ್ಚೆಂಟ್ಸ್ ಅಸೋಸಿಯೇಷನ್ (ಎಕೆಜಿಎಸ್ಎಂಎ) ನ ಎರಡು ಬಣಗಳ ನಡುವಿನ ಜಗಳ ಉಲ್ಬಣಗೊಂಡಿದೆ. ಅರ್ಜೆಂಟೀನಾ ಫುಟ್ಬಾಲ್ ತಂಡದ ರಾಜ್ಯ ಭೇಟಿಯನ್ನು ಪ್ರಾಯೋಜಕತ್ವಕ್ಕಾಗಿ ಹಣವನ್ನು ಸಂಗ್ರಹಿಸುವುದಾಗಿ ಭರವಸೆ ನೀಡುವ ಮೂಲಕ ಸಾರ್ವಜನಿಕರನ್ನು ಮತ್ತು ಸರ್ಕಾರವನ್ನು ವಂಚಿಸಿದ್ದಾರೆ ಎಂದು ಒಬ್ಬರು ಇನ್ನೊಬ್ಬರನ್ನು ಆರೋಪಿಸಿದ್ದಾರೆ.
ಅರ್ಚನಾ ಜ್ಯುವೆಲ್ಲರಿ ಕೋಝಿಕ್ಕೋಡ್ನ ಕೆ. ಸುರೇಂದ್ರನ್ ನೇತೃತ್ವದ ಬಣವು, ಜಸ್ಟಿನ್ ಪಾಲಥರ ಬಣದ ವಿರುದ್ಧ ವಂಚನೆಗಾಗಿ ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿಗೆ ದೂರು ಸಲ್ಲಿಸಿದೆ.
ಪಲಾಥರ ಬಣವು ಆರು ತಿಂಗಳ ಅವಧಿಯ 'ಆಲ್ ಕೇರಳ ಶಾಪಿಂಗ್ ಫೆಸ್ಟಿವಲ್' ಅನ್ನು ಘೋಷಿಸಿತ್ತು. ಟಿಕೆಟ್ ಮಾರಾಟ ಮಾಡಲು 'ಒಲೊಪ್ಪೊ' ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತ್ತು, ಇದು ಅರ್ಜೆಂಟೀನಾ ತಂಡದ ಭೇಟಿಯನ್ನು ಪ್ರಾಯೋಜಿಸುವುದಾಗಿ ಹೇಳಿಕೊಂಡಿತ್ತು ಸುರೇಂದ್ರನ್ ನೇತೃತ್ವದ ಬಣವು ಆರೋಪಿಸಿದೆ.
AKGSMAಗೆ ನಿಧಿ ಸಂಗ್ರಹಿಸಲು ಸಾಧ್ಯವಾಗದ ಕಾರಣ ಅನ್ನು ನಂತರ ಪ್ರಾಯೋಜಕರನ್ನಾಗಿ ಬದಲಾಯಿಸಲಾಯಿತು. ರಿಪೋರ್ಟರ್ ಟಿವಿ ಬ್ರಾಡ್ಕಾಸ್ಟಿಂಗ್ ಲಿಮಿಟೆಡ್ ಪ್ರಾಯೋಜಕತ್ವ ವಹಿಸಿಕೊಂಡಿತು. ಆ್ಯಪ್ ಸದಸ್ಯತ್ವಕ್ಕಾಗಿ ವ್ಯಾಪಾರಿಗಳಿಂದ ತಲಾ 10,000 ರೂ.ಗಳನ್ನು ಸಂಗ್ರಹಿಸಿ, ಸದಸ್ಯರಾಗಿರುವ ಅಂಗಡಿಗಳ ಮೂಲಕ ಮಾಡಿದ ಖರೀದಿಗೆ 17.5 ಕೆಜಿ ಚಿನ್ನದ ಉಡುಗೊರೆಯನ್ನು ನೀಡುವ ಭರವಸೆಯನ್ನು ಪಲಾಥರ ಬಣವು ನೀಡಿತ್ತು. ಆದರೆ ಅದನ್ನು ನೀಡಲು ವಿಫಲವಾಯಿತು ಎಂದು ಸುರೇಂದ್ರನ್ ಬಣ ಆರೋಪಿಸಿದೆ.
" ಸರ್ಕಾರ ಮತ್ತು ಗ್ರ್ಯಾಂಡ್ ಕೇರಳ ಶಾಪಿಂಗ್ ಫೆಸ್ಟಿವಲ್ ಅನ್ನು ಉದ್ಘಾಟಿಸಿದ ಅದರ ಮಂತ್ರಿಗಳನ್ನು ಒಂದು ಗುಂಪು ಸುಲಭವಾಗಿ ಮೋಸಗೊಳಿಸಬಹುದು ಎಂಬುದು ತುಂಬಾ ದುರದೃಷ್ಟಕರ. ಪ್ರಾಯೋಜಕರು ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುವ ಭರವಸೆ ನೀಡಿದಾಗ, ಕನಿಷ್ಠ ಅವರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬಹುದಿತ್ತು" ಎಂದು ಸುರೇಂದ್ರನ್ ನೇತೃತ್ವದ AKGSMA ಯ ಪ್ರಧಾನ ಕಾರ್ಯದರ್ಶಿ ಎಸ್ ಅಬ್ದುಲ್ ನಾಸರ್, ಸರ್ಕಾರ ಮತ್ತು ಸಚಿವರು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲು ಪ್ರಾಯೋಜಕರ ವಿಶ್ವಾಸಾರ್ಹತೆಯನ್ನು ಪರಿಶೀಲಿಸದಿದ್ದಕ್ಕಾಗಿ ನಿರಾಶೆ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಪಾಲಥರ ಬಣದ ರಾಜ್ಯ ಕಾರ್ಯದರ್ಶಿ ಮೊಯ್ದು ವರಮಂಗಲತ್, "ಇದು ಮಾನನಷ್ಟ ಪ್ರಕರಣವಾಗಿದ್ದು, ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಸಂಸ್ಥೆಗಳ ನಿರ್ಬಂಧಗಳಿಂದಾಗಿ ಸಮಯಕ್ಕೆ ಸರಿಯಾಗಿ ಹಣವನ್ನು ಸಂಗ್ರಹಿಸಲು ಸಾಧ್ಯವಾಗದ ಕಾರಣ ನಾವು ಪ್ರಾಯೋಜಕತ್ವದಿಂದ ಸ್ವಯಂಪ್ರೇರಣೆಯಿಂದ ಹಿಂದೆ ಸರಿದಿದ್ದೇವೆ. ಆರೋಪಗಳು ಆಧಾರರಹಿತವಾಗಿವೆ" ಎಂದು ಪ್ರತಿಕ್ರಿಯಿಸಿದರು.







