ಮಿಕ್ಸೆಡ್ ಡಬಲ್ಸ್ ಬ್ಯಾಡ್ಮಿಂಟನ್: ಪದಕ ಖಚಿತಪಡಿಸಿದ ನಿತೇಶ್ ಕುಮಾರ್–ತುಳಸಿಮತಿ

Photo credit : NDTV
ನಗೋಯ : ಭಾರತದ ನಿತೇಶ್ ಕುಮಾರ್ ಹಾಗೂ ತುಳಸಿಮತಿ ಮುರುಗೇಶನ್ ಪ್ಯಾರಾ ಏಶ್ಯನ್ ಗೇಮ್ಸ್ನ ಮಿಕ್ಸೆಡ್ ಡಬಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯ ಎಸ್ಎಲ್3–ಎಸ್ಯು5 ಗ್ರೂಪ್ ಬಿಯಲ್ಲಿ ಅಗ್ರ ಸ್ಥಾನ ಪಡೆದು ಸೆಮಿಫೈನಲ್ಗೆ ಪ್ರವೇಶಿಸಿದರು. ಇದರೊಂದಿಗೆ ಪದಕ ಖಚಿತಪಡಿಸಿದರು.
ಭಾರತೀಯ ಜೋಡಿ ತನ್ನ ಆರಂಭಿಕ ಪಂದ್ಯದಲ್ಲಿ ಚೀನಾದ ಯಾಂಗ್ ಜಿಯಾನ್ಯುಯಾನ್ ಹಾಗೂ ಯಾಂಗ್ ಕ್ಯೂಕ್ಸಿಯಾರಿಂದ ವಾಕ್ಓವರ್ ಪಡೆಯಿತು. ಬಳಿಕ ಚೀನಾದ ಚೆನ್ ಪೆಂಗ್ಫೀ ಹಾಗೂ ಹುಯಾಂಗ್ ಝಿಕ್ಸ್ಯಾನ್ ಜೋಡಿಯನ್ನು ಕೇವಲ 23 ನಿಮಿಷಗಳಲ್ಲಿ 21-4, 21-18 ಅಂತರದಿಂದ ಮಣಿಸಿತು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ನಿತೇಶ್, ಪುರುಷರ ಸಿಂಗಲ್ಸ್ ಎಸ್ಎಲ್3 ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಜೂ ಡಾಂಗ್ ಅವರನ್ನು 21-13, 21-15 ಅಂತರದಿಂದ ಮಣಿಸಿದರು.
ಋತಿಕ್ ರಘುಪತಿ ಪುರುಷರ ಸಿಂಗಲ್ಸ್ ಎಸ್ಯು5 ಗ್ರೂಪ್ ಸಿ ಪಂದ್ಯದಲ್ಲಿ ಥಾಯ್ಲೆಂಡ್ನ ಸೋಮ್ಸಿರಿ ಪ್ರಿಚಾರನ್ನು 21-12, 21-12 ಅಂತರದಿಂದ ಮಣಿಸಿದರು.
Next Story




