ಮೈದಾನದಲ್ಲಿ ಮುಹಮ್ಮದ್ ಸಿರಾಜ್ ತಮ್ಮ ಸರ್ವಸ್ವವನ್ನೂ ಅರ್ಪಿಸುತ್ತಾರೆ: ಜೋ ರೂಟ್ ಶ್ಲಾಘನೆ

Photo credit: PTI
ಲಂಡನ್: ಭಾರತ ತಂಡದ ಬಲಗೈ ವೇಗದ ಬೌಲರ್ ಮುಹಮ್ಮದ್ ಸಿರಾಜ್ ರನ್ನು ನೈಜ ಹೋರಾಟಗಾರ ಎಂದು ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್ ಶ್ಲಾಘಿಸಿದ್ದಾರೆ.
‘ಮೈದಾನದಲ್ಲಿ ಮುಹಮ್ಮದ್ ಸಿರಾಜ್ ತಮ್ಮ ಸರ್ವಸ್ವವನ್ನೂ ಅರ್ಪಿಸುತ್ತಾರೆ. ಕೆಲವೊಮ್ಮೆ ನಕಲಿ ಕೋಪವನ್ನೂ ಪ್ರದರ್ಶಿಸುತ್ತಾರೆ” ಎಂದು ಅವರು ಧಾಟಿಯಲ್ಲಿ ಪ್ರಶಂಸಿಸಿದ್ದಾರೆ.
“ಸಿರಾಜ್ ನೈಜ ಹೋರಾಟಗಾರ. ಅವರಂತಹ ವ್ಯಕ್ತಿತ್ವ ಹೊಂದಿರುವ ಆಟಗಾರರು ತಂಡದಲ್ಲಿರುವುದನ್ನು ಎಲ್ಲರೂ ಬಯಸುತ್ತಾರೆ. ಅವರು ತಮ್ಮ ತಂಡಕ್ಕಾಗಿ ಸರ್ವಸ್ವವನ್ನೂ ನೀಡುತ್ತಾರೆ. ಹೀಗಾಗಿ, ಅವರಿಗೆ ಈ ಶ್ರೇಯ ಸಲ್ಲಬೇಕು” ಎಂದು ಅವರು ಮುಕ್ತವಾಗಿ ಹೊಗಳಿದ್ದಾರೆ.
“ಅವರು ಕೆಲವೊಮ್ಮೆ ನಕಲಿ ಕೋಪವನ್ನೂ ಪ್ರದರ್ಶಿಸುತ್ತಾರೆ. ಅದು ನಮಗೆ ಅರ್ಥವಾಗುತ್ತದೆ. ಅವರು ನಿಜವಾಗಿಯೂ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರೆ. ತಂಡಕ್ಕಾಗಿ ಕಠಿಣ ಪ್ರಯತ್ನ ಮಾಡುತ್ತಾರೆ” ಎಂದು ಅವರು ಪ್ರಶಂಸೆಯ ಮಳೆ ಸುರಿಸಿದ್ದಾರೆ.
“ಸಿರಾಜ್ ಕೌಶಲ್ಯಯುತ ಬೌಲರ್ ಆಗಿದ್ದು, ಅದರಿಂದಾಗಿಯೇ ಅವರು ಅಷ್ಟು ವಿಕೆಟ್ ಗಳನ್ನು ಗಳಿಸಲು ಸಾಧ್ಯವಾಗಿದೆ” ಎಂದೂ ಸಹ ಜೋ ರೂಟ್ ಗುಣಗಾನ ಮಾಡಿದ್ದಾರೆ.
‘ಸಿರಾಜ್ ಯಾವಾಗಲೂ ಹಸನ್ಮುಖವಾಗಿಯೇ ವರ್ತಿಸುತ್ತಾರೆ. ಅವರ ಬೌಲಿಂಗ್ ಎದುರು ಆಡುವುದನ್ನು ನಾನು ಇಷ್ಟಪಡುತ್ತೇನೆ. ಅಭಿಮಾನಿಗಳಿಗೆ ಅದಕ್ಕಿಂತಲೂ ಹೆಚ್ಚೇನು ಬೇಕಿಲ್ಲ. ಅವರು ತಮ್ಮ ಪ್ರದರ್ಶನದಿಂದಲೇ ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ” ಎಂದೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Joe Root is not fooled by Siraj’s 'fake-anger' - he’s a fan anyway pic.twitter.com/PnEJ3eityu
— ESPNcricinfo (@ESPNcricinfo) August 4, 2025







