ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಕ್ಯಾಚ್ | ಸ್ಟೀವ್ ಸ್ಮಿತ್ ದಾಖಲೆ ಮುರಿದ ಜೋ ರೂಟ್

ಜೋ ರೂಟ್ | Photo Credit : PTI
ಲೀಡ್ಸ್: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಕ್ಯಾಚ್ಗಳನ್ನು ಪಡೆದ ಫೀಲ್ಡರ್ ಎನಿಸಿಕೊಂಡಿರುವ ಜೋ ರೂಟ್ ಆಸ್ಟ್ರೇಲಿಯದ ದಿಗ್ಗಜ ಸ್ಟೀವ್ ಸ್ಮಿತ್ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದರು.
ಹೆಡ್ಡಿಂಗ್ಲೆಯಲ್ಲಿ ಮೊದಲನೇ ಟೆಸ್ಟ್ನ ಮೂರನೇ ದಿನವಾದ ಶುಕ್ರವಾರ ಪಾಕಿಸ್ತಾನದ ಎರಡನೇ ಇನಿಂಗ್ಸ್ನಲ್ಲಿ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಆಝಾನ್ ಅವೈಸ್ ನೀಡಿದ ಕ್ಯಾಚನ್ನು ಪಡೆದ ರೂಟ್ ಈ ಸಾಧನೆ ಮಾಡಿದರು.
ಅವೈಸ್ 14 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಈ ಮೂಲಕ ಪಾಕಿಸ್ತಾನದ ಇಬ್ಬರೂ ಆರಂಭಿಕ ಅಟಗಾರರು ಬೇಗನೆ ಪೆವಿಲಿಯನ್ಗೆ ವಾಪಸಾದರು.
ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ 219ನೇ ಕ್ಯಾಚ್ ಪಡೆದರು. ಇದರೊಂದಿಗೆ ಸ್ಮಿತ್(218 ಕ್ಯಾಚ್ಗಳು)ದಾಖಲೆಯನ್ನು ಮುರಿದರು. ಪಾಕಿಸ್ತಾನದ ಮೊದಲ ಇನಿಂಗ್ಸ್ನಲ್ಲಿ ರೂಟ್ ಅವರು ಸ್ಮಿತ್ ದಾಖಲೆಯನ್ನು ಸರಿಗಟ್ಟಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದ ಫೀಲ್ಡರ್ಗಳು
219-ಜೋ ರೂಟ್
218-ಸ್ಟೀವ್ ಸ್ಮಿತ್
210-ರಾಹುಲ್ ದ್ರಾವಿಡ್
205-ಮಹೇಲ ಜಯವರ್ಧನೆ
200-ಜಾಕಸ್ ಕಾಲಿಸ್






