IPL 2026 | ಒಂದೇ ಋತುವಿನಲ್ಲಿ ಗರಿಷ್ಠ ಸಿಕ್ಸರ್; ಕ್ರಿಸ್ ಗೇಲ್ ದಾಖಲೆ ಮುರಿದ ಸೂರ್ಯವಂಶಿ

ವೈಭವ್ ಸೂರ್ಯವಂಶಿ , ಕ್ರಿಸ್ ಗೇಲ್ | Photo Credit : PTI
ನ್ಯೂ ಚಂಡಿಗಡ, ಮೇ 27: ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಐಪಿಎಲ್ ಋತುವೊಂದರಲ್ಲಿ ಗರಿಷ್ಠ ಸಿಕ್ಸರ್ಗಳನ್ನು ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.
ಪಂದ್ಯದ ನಾಲ್ಕನೇ ಓವರ್ನಲ್ಲಿ ಸಾಕಿಬ್ ಹುಸೇನ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಸೂರ್ಯವಂಶಿ 60ನೇ ಸಿಕ್ಸರ್ ಸಿಡಿಸಿದರು. ಈ ಮೂಲಕ ಗೇಲ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.
ಗೇಲ್ 2013ರ ಐಪಿಎಲ್ ಋತುವಿನಲ್ಲಿ ಆರ್ಸಿಬಿ ಪರ ಆಡುತ್ತಿದ್ದಾಗ ಒಟ್ಟು 59 ಸಿಕ್ಸರ್ಗಳನ್ನು ಸಿಡಿಸಿದ್ದರು. ಸೂರ್ಯವಂಶಿ 2026ರಲ್ಲಿ ಒಟ್ಟು 65 ಸಿಕ್ಸರ್ಗಳನ್ನು ಸಿಡಿಸಿ ಗೇಲ್ ದಾಖಲೆಯನ್ನು ಪುಡಿಗಟ್ಟಿದರು.
Next Story




