ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಸರಣಿ | ಗರಿಷ್ಠ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಸಿರಾಜ್ ಗೆ ಅಗ್ರ ಸ್ಥಾನ

Photo Credit: AP
ಲಂಡನ್, ಆ.3: ದ ಓವಲ್ ನಲ್ಲಿ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 4ನೇ ದಿನವಾದ ರವಿವಾರ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಓಲಿ ಪೋಪ್ ವಿಕೆಟನ್ನು ಉರುಳಿಸಿದ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರು ಈಗ ನಡೆಯುತ್ತಿರುವ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಪ್ರಸಕ್ತ ಸರಣಿಯಲ್ಲಿ 19 ವಿಕೆಟ್ ಗಳನ್ನು ಪಡೆದಿರುವ ಇಂಗ್ಲೆಂಡ್ ತಂಡದ ಬೌಲರ್ ಜೋಶ್ ಟಂಗ್ ಅವರ ದಾಖಲೆಯನ್ನು ಮುರಿದ ಸಿರಾಜ್ ಅಗ್ರ ಸ್ಥಾನಕ್ಕೇರಿದರು.
ಗಾಯದ ಸಮಸ್ಯೆಯ ಕಾರಣದಿಂದ ಕೊನೆಯ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 3ನೇ ಸ್ಥಾನದಲ್ಲಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಮೂರೇ ಪಂದ್ಯಗಳನ್ನು ಆಡಿದ್ದ ಭಾರತದ ಹಿರಿಯ ವೇಗಿ ಜಸ್ಪ್ರಿತ್ ಬುಮ್ರಾ 4ನೇ ಸ್ಥಾನದಲ್ಲಿದ್ದಾರೆ.
ಇದೇ ಮೊದಲ ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಆಕಾಶ್ ದೀಪ್ ಪ್ರಸಕ್ತ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಟಾಪ್-5 ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
► ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದವರು
ಬೌಲರ್ ಪಂದ್ಯ ವಿಕೆಟ್ ಸರಾಸರಿ ಇನಿಂಗ್ಸ್ನಲ್ಲಿ ಬೆಸ್ಟ್ ಬೌಲಿಂಗ್
ಮುಹಮ್ಮದ್ ಸಿರಾಜ್ 5 20 34.20 6/70
ಜೋಶ್ ಟಂಗ್ 3 19 29.05 5/125
ಬೆನ್ ಸ್ಟೋಕ್ಸ್ 4 17 25.23 5/72
ಜಸ್ಪ್ರಿತ್ ಬುಮ್ರಾ 3 14 26.00 5/74
ಆಕಾಶ್ ದೀಪ್ 3 12 34.00 6/99







