ಐಪಿಎಲ್ ಕಮೆಂಟರಿ ವೇಳೆ ಡಿಸ್ಮಿಸ್ ಬದಲು ಡಿಮೈಸೆಸ್ ಎಂದ ಮುರಳಿ ಕಾರ್ತಿಕ್!
ಇದು ಕ್ಷಮಿಸಲಾಗದ ತಪ್ಪು, ಕಮೆಂಟರಿ ತಂಡದಿಂದ ಮುರಳಿಯನ್ನು ತೆಗೆದುಹಾಕಿ ಎಂದ ಜನರು

ಮುರಳಿ ಕಾರ್ತಿಕ್ | Photo: X
ಅಹಮದಾಬಾದ್: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರವಿವಾರ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್ 2025 ಕ್ವಾಲಿಫೈಯರ್ 2 ಪಂದ್ಯದ ಕೆಮಂಟರಿ ವೇಳೆ ಭಾರತದ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್ ಬಾಯ್ತಪ್ಪಿ ಬಳಿಸಿದ ಪದವೊಂದು ವಿವಾದಕ್ಕೆ ಕಾರಣವಾಗಿದೆ.
ಐಪಿಎಲ್ ಪಂದ್ಯದ ಲೈವ್ ಕಮೆಂಟರಿ ವೇಳೆ "the dismiss of Priyansh Arya" (ಪ್ರಿಯಾಂಶ್ ಆರ್ಯ ಅವರ ವಿಕೆಟ್ ಪತನ) ಎನ್ನುವ ಬದಲು "the demise of Priyansh Arya"(ಪ್ರಿಯಾಂಶ್ ಆರ್ಯ ನಿಧನ) ಎಂದು ಹೇಳಿದ್ದು ವ್ಯಾಪಕ ಟೀಕೆಗೆ ಗುರಿಯಾಯಿತು. ಮುರಳಿ ಕಾರ್ತಿಕ್ ವಿರುದ್ಧ ಕ್ರಮಕೈಗೊಳ್ಳುವಂತೆ ಹಲವು ಜನರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಗೆ ಒತ್ತಾಯಿಸಿದ್ದಾರೆ.
ಎರಡನೇ ಎಲಿಮಿನೇಟರ್ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ನೀಡಿದ್ದ 204 ರನ್ ಗುರಿಯನ್ನು ಬೆನ್ನತ್ತುವ ವೇಳೆ ಪಂಜಾಬ್ ಕಿಂಗ್ಸ್ ಓಪನರ್ ಪ್ರಿಯಾಂಶ್ ಆರ್ಯಾ ಅವರು 20 ರನ್ ಗಳಿಸಿ ಔಟ್ ಆದಾಗ ಮುರಳಿ ಕಾರ್ತಿಕ್ ಅವರು ಕಮೆಂಟರಿ ನೀಡುವಾಗ ಈ ಅಚಾತುರ್ಯ ನಡೆದಿದೆ.







