ಎನ್ಸಿ ಕ್ಲಾಸಿಕ್ ಟೂರ್ನಿ ಗೆದ್ದ ನೀರಜ್ ಚೋಪ್ರಾ

ಬೆಂಗಳೂರು: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಭಾರತದಲ್ಲಿ ನಡೆದ ಮೊತ್ತ ಮೊದಲ ಅಂತರ್ರಾಷ್ಟ್ರೀಯ ಜಾವೆಲಿನ್ ಸ್ಪರ್ಧಾವಳಿ ಎನ್ಸಿ ಕ್ಲಾಸಿಕ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಬೆಂಗಳೂರಿನ ಶ್ರೀಕಂಠೀರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ಪರ್ಧಾವಳಿಯಲ್ಲಿ ನೀರಜ್ ಚೋಪ್ರಾ 3ನೇ ಸುತ್ತಿನಲ್ಲಿ 86.18 ಮೀ.ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದರು. ಕೀನ್ಯದ ಜುಲಿಯಸ್ ಯೆಗೊ(84.51 ಮೀ.)ಹಾಗೂ ಶ್ರೀಲಂಕಾದ ರುಮೇಶ್ ಪಥಿರಗೆ(83.34 ಮೀ.)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು.
"ಬೆಂಗಳೂರಿನಲ್ಲಿ ನನಗೆ ಉತ್ತಮ ಅನುಭವವಾಯಿತು. ನಾನು ಇನ್ನಷ್ಟು ದೂರ ಜಾವೆಲಿನ್ ಎಸೆಯಲು ಬಯಸಿದ್ದೆ. ಆದರೆ ಗಾಳಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಇದು ತುಂಬಾ ಕಠಿಣ ಸ್ಪರ್ಧಾವಳಿಯಾಗಿತ್ತು. ನಮಗೆ ಸಿಕ್ಕ ಬೆಂಬಲದಿಂದ ನನಗೆ ಖುಷಿಯಾಗಿದೆ. ಈ ಸ್ಪರ್ಧೆಯನ್ನು ಆಯೋಜಿಸಿದ್ದು ದೊಡ್ಡ ಸಾಧನೆ’’ಎಂದು ನೀರಜ್ ಚೋಪ್ರಾ ಹೇಳಿದರು.
Next Story