ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಆರಂಭಿಕ ಆಟಗಾರನಾಗಿ ಗರಿಷ್ಠ ರನ್
ಸಚಿನ್ ತೆಂಡುಲ್ಕರ್ ದಾಖಲೆ ಪುಡಿಗಟ್ಟಿದ ರೋಹಿತ್ ಶರ್ಮಾ

ರೋಹಿತ್ ಶರ್ಮಾ , ಸಚಿನ್ ತೆಂಡುಲ್ಕರ್ | PTI
ಹೊಸದಿಲ್ಲಿ: ಟೀಮ್ ಇಂಡಿಯಾದ ನಾಯಕ ಹಾಗೂ ಬ್ಯಾಟಿಂಗ್ ಮಾಂತ್ರಿಕ ರೋಹಿತ್ ಶರ್ಮಾ ರವಿವಾರ ಕಟಕ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ತನ್ನ 32ನೇ ಶತಕ ಸಿಡಿಸಿ ತನ್ನ ಮೊದಲಿನ ಲಯಕ್ಕೆ ಮರಳಿದ್ದಾರೆ.
ದೀರ್ಘ ಸಮಯದ ನಂತರ ಶತಕ ಗಳಿಸಿರುವ ರೋಹಿತ್ ಭಾರತ ಕ್ರಿಕೆಟ್ ತಂಡಕ್ಕೆ 4 ವಿಕೆಟ್ಗಳ ಗೆಲುವಿಗೆ ನೆರವಾಗಿದ್ದಲ್ಲದೆ, ಕ್ರಿಕೆಟ್ ಲೆಜೆಂಡ್ಗಳಿದ್ದ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.
90 ಎಸೆತಗಳಲ್ಲಿ 119 ರನ್ ಗಳಿಸಿದ ರೋಹಿತ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿರುವುದಲ್ಲದೆ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಆರಂಭಿಕ ಆಟಗಾರನಾಗಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು.
ಆರಂಭಿಕ ಆಟಗಾರನಾಗಿ ರೋಹಿತ್ ಇದೀಗ 343 ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ 45.43ರ ಸರಾಸರಿಯಲ್ಲಿ 15,404 ರನ್ ಗಳಿಸಿದರು. ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ 346 ಪಂದ್ಯಗಳಲ್ಲಿ 15,335 ರನ್ ಗಳಿಸಿದ್ದ ಸಚಿನ್ ದಾಖಲೆಯನ್ನು ಮುರಿದರು. ಭಾರತದ ಆರಂಭಿಕ ಆಟಗಾರನಾಗಿ ಗರಿಷ್ಠ ರನ್ ಗಳಿಸಿದ ದಾಖಲೆಯು ಈಗಲೂ ವೀರೇಂದ್ರ ಸೆಹ್ವಾಗ್ ಹೆಸರಲ್ಲಿದೆ. ಸೆಹ್ವಾಗ್ 15,758 ರನ್ ಗಳಿಸಿದ್ದಾರೆ. ರೋಹಿತ್ ಅವರು ಸೆಹ್ವಾಗ್ ದಾಖಲೆ ಮುರಿಯುವ ಹಾದಿಯಲ್ಲಿದ್ದಾರೆ.
*ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ರನ್ ಸರದಾರರ ಪಟ್ಟಿ
ವೀರೇಂದ್ರ ಸೆಹ್ವಾಗ್-15,758 ರನ್(321 ಪಂದ್ಯಗಳು)
ರೋಹಿತ್ ಶರ್ಮಾ-15,404 ರನ್(343 ಪಂದ್ಯಗಳು)
ಸಚಿನ್ ತೆಂಡುಲ್ಕರ್-15,335 ರನ್(346 ಪಂದ್ಯಗಳು)
ಸುನೀಲ್ ಗವಾಸ್ಕರ್-12,258 ರನ್(202 ಪಂದ್ಯಗಳು)
ಶಿಖರ್ ಧವನ್-10,867 ರನ್(268 ಪಂದ್ಯಗಳು)
*ರಾಹುಲ್ ದ್ರಾವಿಡ್ ದಾಖಲೆ ಮುರಿದ ರೋಹಿತ್
ರೋಹಿತ್ ತನ್ನ ಅಮೋಘ ಇನಿಂಗ್ಸ್ನ ಮೂಲಕ ಏಕದಿನ ಇತಿಹಾಸದಲ್ಲಿ ಟಾಪ್-10 ರನ್ ಗಳಿಕೆದಾರರ ಎಲೈಟ್ ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ದಾಖಲೆ(10,889 ರನ್)ಯನ್ನು ಮುರಿದಿದ್ದಾರೆ.
ರೋಹಿತ್ ಇದೀಗ 267 ಏಕದಿನ ಪಂದ್ಯಗಳಲ್ಲಿ 49.26ರ ಸರಾಸರಿಯಲ್ಲಿ, 92.70ರ ಸ್ಟ್ರೈಕ್ರೇಟ್ನಲ್ಲಿ, 32 ಶತಕಗಳು ಹಾಗೂ 57 ಅರ್ಧಶತಕಗಳ ಸಹಿತ 10,987 ರನ್ ಗಳಿಸಿದ್ದಾರೆ.
*ಏಕದಿನ ಇತಿಹಾಸದಲ್ಲಿ ಟಾಪ್-10 ಗರಿಷ್ಠ ರನ್ ಸ್ಕೋರರ್ಗಳು
ಸಚಿನ್ ತೆಂಡುಲ್ಕರ್-18,426 ರನ್(463 ಪಂದ್ಯಗಳು)
ಕುಮಾರ ಸಂಗಕ್ಕರ-14,234 ರನ್(404 ಪಂದ್ಯಗಳು)
ವಿರಾಟ್ ಕೊಹ್ಲಿ-13,911 ರನ್(296 ಪಂದ್ಯಗಳು)
ರಿಕಿ ಪಾಂಟಿಂಗ್-13,704 ರನ್(375 ಪಂದ್ಯಗಳು)
ಸನತ್ ಜಯಸೂರ್ಯ-13,430 ರನ್(445 ಪಂದ್ಯಗಳು)
ಮಹೇಲ ಜಯವರ್ಧನೆ-12,650 ರನ್(448 ಪಂದ್ಯಗಳು)
ಇಂಝಮಮುಲ್ ಹಕ್-11,739 ರನ್(378 ಪಂದ್ಯಗಳು)
ಜಾಕಸ್ ಕಾಲಿಸ್-11,579 ರನ್(328 ಪಂದ್ಯಗಳು)
ಸೌರವ್ ಗಂಗುಲಿ-11,363 ರನ್(311 ಪಂದ್ಯಗಳು)
ರೋಹಿತ್ ಶರ್ಮಾ-10,987 ರನ್(267 ಪಂದ್ಯಗಳು)







