ವೈಭವ್ ಸೂರ್ಯವಂಶಿಯ ಸ್ಪೋಟಕ ಬ್ಯಾಟಿಂಗ್ ದಾಖಲೆ ಮುರಿದ ನಿಕೊಲಸ್ ಪೂರನ್

ವೈಭವ್ ಸೂರ್ಯವಂಶಿ , ನಿಕೊಲಸ್ ಪೂರನ್ | Photo Credit : PTI
ಹೊಸದಿಲ್ಲಿ, ಮೇ4: ಲಕ್ನೊ ಸೂಪರ್ ಜಯಂಟ್ಸ್ ತಂಡದ ಬ್ಯಾಟರ್ ನಿಕೊಲಸ್ ಪೂರನ್ ಐಪಿಎಲ್ನಲ್ಲಿ ತನ್ನ ಪವರ್ಹಿಟ್ಟಿಂಗ್ ಪ್ರದರ್ಶನ ಮುಂದುವರಿಸಿದರು. ಈ ಬಾರಿ ಅವರು ವೈಭವ್ ಸೂರ್ಯವಂಶಿಯ ಲೀಗ್ನ ಅತ್ಯಂತ ಸ್ಫೋಟಕ ಬ್ಯಾಟಿಂಗ್ ದಾಖಲೆಯೊಂದನ್ನು ಮುರಿದರು.
ಮುಂಬೈ ಇಂಡಿಯನ್ಸ್ ವಿರುದ್ಧ ಸೋಮವಾರ ಕೇವಲ 16 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿರುವ ಪೂರನ್ ಅವರು 20 ಎಸೆತದೊಳಗೆ ಐಪಿಎಲ್ನಲ್ಲಿ ಐದು ಅರ್ಧಶತಕಗಳನ್ನು ಗಳಿಸಿದ ಎರಡನೇ ಆಟಗಾರನಾಗಿದ್ದಾರೆ. ಟೂರ್ನಿಯ ಇತಿಹಾಸದಲ್ಲಿ ಅಭಿಷೇಕ್ ಶರ್ಮಾ(6)ಅತ್ಯಂತ ಹೆಚ್ಚು ಅರ್ಧಶತಕಗಳನ್ನು ಗಳಿಸಿದ್ದಾರೆ.
ಈ ವರ್ಷದ ಟೂರ್ನಿಯಲ್ಲಿ ಮೊದಲ ಬಾರಿ ಮೂರನೇ ಕ್ರಮಾಂಕದಲ್ಲಿ ಆಡಿದ ಪೂರನ್ ಕೇವಲ 21 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎಂಟು ಸಿಕ್ಸರ್ಗಳ ಸಹಿತ 63 ರನ್ ಗಳಿಸಿದ್ದಾರೆ.
ಐಪಿಎಲ್ನಲ್ಲಿ 20 ಎಸೆತದೊಳಗೆ ಗರಿಷ್ಠ 50 ರನ್ ಗಳಿಸಿದ ಆಟಗಾರರು
6- ಅಭಿಷೇಕ್ ಶರ್ಮಾ
5-ನಿಕೊಲಸ್ ಪೂರನ್
4-ವೈಭವ್ ಸೂರ್ಯವಂಶಿ
Next Story




