ಏಕದಿನ ಕ್ರಿಕೆಟ್: ಸತತ 12ನೇ ಬಾರಿ ಟಾಸ್ ಸೋತು ದಾಖಲೆ ಬರೆದ ಭಾರತ ತಂಡ!

ರೋಹಿತ್ ಶರ್ಮ , ಮುಹಮ್ಮದ್ ರಿಝ್ವಾನ್ | PC : PTI
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರವಿವಾರ ಪಾಕಿಸ್ತಾನ ತಂಡದ ನಾಯಕ ಮುಹಮ್ಮದ್ ರಿಝ್ವಾನ್ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಏಕದಿನ ಕ್ರಿಕೆಟ್ನಲ್ಲಿ ಸತತ 12ನೇ ಬಾರಿ ಟಾಸ್ ಸೋತ ಭಾರತ ಕ್ರಿಕೆಟ್ ತಂಡವು ವಿಶ್ವ ದಾಖಲೆ ನಿರ್ಮಿಸಿತು.
ಭಾರತ ತಂಡವು ನವೆಂಬರ್ 23ರ ನಂತರ ಸತತ 12 ಪಂದ್ಯಗಳಲ್ಲಿ ಟಾಸ್ ಸೋತಿದೆ.
ಈ ಮೊದಲು ನೆದರ್ಲ್ಯಾಂಡ್ಸ್ ತಂಡವು 50 ಓವರ್ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ಬಾರಿ ಟಾಸ್ ಸೋತಿದೆ. ನೆದರ್ಲ್ಯಾಂಡ್ಸ್ ತಂಡವು 2011ರ ಮಾರ್ಚ್ನಿಂದ 2013ರ ಆಗಸ್ಟ್ ತನಕ ಸತತ 11 ಪಂದ್ಯಗಳಲ್ಲಿ ಟಾಸ್ ಸೋತಿತ್ತು.
Next Story





