ಏಕದಿನ ರ್ಯಾಂಕಿಂಗ್: ನಂ.1 ಸ್ಥಾನಕ್ಕೇರಿದ ಭಾರತ

Photo: Twitter@ESPNcricinfo
ಮೊಹಾಲಿ, ಸೆ.22: ಆಸ್ಟ್ರೇಲಿಯ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿರುವ ಭಾರತವು ಏಕದಿನ ಟೀಮ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದೆ.
ಒಟ್ಟು 116 ಅಂಕ ಪಡೆದಿರುವ ಭಾರತವು ಪಾಕಿಸ್ತಾನವನ್ನು(115 ಅಂಕ) 2ನೇ ಸ್ಥಾನಕ್ಕೆ ತಳ್ಳಿ ನಂ.1 ಸ್ಥಾನಕ್ಕೇರಿತು.111 ಅಂಕ ಗಳಿಸಿರುವ ಆಸ್ಟ್ರೇಲಿಯ 3ನೇ ಸ್ಥಾನದಲ್ಲಿದೆ.
ಭಾರತವು ಇದೀಗ ಪುರುಷರ ಕ್ರಿಕೆಟ್ನ ಎಲ್ಲ 3 ಪ್ರಕಾರಗಳಲ್ಲಿ ಅಗ್ರಸ್ಥಾನ ಪಡೆದಿರುವ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತವು ಟೆಸ್ಟ್ ಹಾಗೂ ಟ್ವೆಂಟಿ-20 ಕ್ರಿಕೆಟ್ನಲ್ಲಿ ನಂ.1 ತಂಡವಾಗಿದೆ.
Next Story







