ಮಹಿಳೆಯರ ಏಕದಿನ ವಿಶ್ವಕಪ್ ಕ್ವಾಲಿಫೈಯರ್ಸ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ

ಸಾಂದರ್ಭಿಕ ಚಿತ್ರ | PC : PTI
ಲಾಹೋರ್: ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಮಹಿಳೆಯರ 50 ಓವರ್ಗಳ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ಸ್ ಟೂರ್ನಿಗೆ ಪಾಕಿಸ್ತಾನವು ಆತಿಥೇಯ ದೇಶವಾಗುವುದು ಖಚಿತವಾಗಿದೆ. ಈ ಟೂರ್ನಿಯಲ್ಲಿ 6 ತಂಡಗಳಾದ ಪಾಕಿಸ್ತಾನ, ಸ್ಕಾಟ್ಲ್ಯಾಂಡ್, ಐರ್ಲ್ಯಾಂಡ್, ಶ್ರೀಲಂಕಾ, ಥಾಯ್ಲೆಂಡ್ ಹಾಗೂ ವೆಸ್ಟ್ಇಂಡೀಸ್ ತಂಡಗಳು ಭಾಗವಹಿಸಲಿವೆ.
ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ)ಸಹಯೋಗದೊಂದಿಗೆ ಸ್ಪರ್ಧೆಯ ದಿನಾಂಕಗಳು ಹಾಗೂ ಸ್ಥಳಗಳನ್ನು ಅಂತಿಮಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ)ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರಾಚಿ, ಮುಲ್ತಾನ್ ಹಾಗೂ ಫೈಸಲಾಬಾದ್ ನಗರಗಳು ಟೂರ್ನಿಯ ಆತಿಥ್ಯವಹಿಸುವ ಸಾಧ್ಯತೆಯಿದೆ.
ಈಗ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ, ನ್ಯೂಝಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ಒಳಗೊಂಡ ತ್ರಿಕೋನ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿರುವ ಪಾಕಿಸ್ತಾನ ಮತ್ತೊಂದು ಐಸಿಸಿ ಸ್ಪರ್ಧೆಯ ಆತಿಥ್ಯವನ್ನು ವಹಿಸುವ ಅವಕಾಶ ಲಭಿಸಿದ್ದಕ್ಕೆ ಪಿಸಿಬಿ ಅಧಿಕಾರಿಯೊಬ್ಬರು ಸಂಭ್ರಮ ವ್ಯಕ್ತಪಡಿಸಿದರು.
ಪಾಕಿಸ್ತಾನವು ಇದೇ ಮೊದಲ ಬಾರಿ ಮಹಿಳೆಯರ ಐಸಿಸಿ ಟೂರ್ನಿಯೊಂದನ್ನು ಆಯೋಜಿಸುತ್ತಿದ್ದು ಮಹತ್ವದ ಮೈಲಿಗಲ್ಲು ಸ್ಥಾಪಿಸಲಿದೆ.
ಮಹಿಳೆಯರ 50 ಓವರ್ಗಳ ವಿಶ್ವಕಪ್ ಕ್ವಾಲಿಫೈಯರ್ಸ್ ಟೂರ್ನಿಯು ಪ್ರತಿಷ್ಠಿತ ಮಹಿಳೆಯರ ಕ್ರಿಕೆಟ್ ವಿಶ್ವಕಪ್ನಲ್ಲಿ ಸ್ಥಾನ ಗಿಟ್ಟಿಸಲಿರುವ ತಂಡಗಳನ್ನು ನಿರ್ಣಯಿಸಲಿದೆ.
ಪಿಚ್ ರಿಪೋರ್ಟ್
ದುಬೈ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ಗೆ ಸವಾಲಿನದ್ದಾಗಿದೆ ಎಂದು ಸಾಬೀತಾಗಿದೆ. ಪಂದ್ಯದ ನಿರ್ಣಾಯಕ ಅವಧಿಗಳಲ್ಲಿ ಎರಡೂ ತಂಡಗಳ ಸ್ಪಿನ್ ಬೌಲರ್ಗಳು ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ. ಫೆಬ್ರವರಿ 23ರಂದು ಪಾಕಿಸ್ತಾನ ವಿರುದ್ಧ ಭಾರತ ಆಡಿರುವ ಪಿಚ್ನಲ್ಲೇ ಸೆಮಿ ಫೈನಲ್ ಪಂದ್ಯ ನಡೆಯಲಿದೆ.
ಅಂಕಿ-ಅಂಶ
► 2010ರ ನಂತರ ಭಾರತ ತಂಡವು ಆಸ್ಟ್ರೇಲಿಯ ವಿರುದ್ಧ 23 ಪಂದ್ಯಗಳಲ್ಲಿ ಜಯ, 23ರಲ್ಲಿ ಸೋತಿದೆ.
► ಏಕದಿನ ಕ್ರಿಕೆಟ್ನಲ್ಲಿ 4,000 ರನ್ ಪೂರೈಸಲು ಮ್ಯಾಕ್ಸ್ವೆಲ್ಗೆ 17 ರನ್ ಹಾಗೂ 3,000 ರನ್ ಪೂರ್ಣಗೊಳಿಸಲು ಕೆ.ಎಲ್.ರಾಹುಲ್ಗೆ 33 ರನ್ ಅಗತ್ಯವಿದೆ.
► ಪ್ರಸಕ್ತ ಟೂರ್ನಿಯಲ್ಲಿ ಆಸೀಸ್ನ ಮೂವರು ಪ್ರಮುಖ ವೇಗಿಗಳಾದ ಬೆನ್ ಡ್ವ್ವೆರ್ಶುಯಿಸ್, ನಾಥನ್ ಎಲ್ಲಿಸ್ ಹಾಗೂ ಸ್ಪೆನ್ಸರ್ ಜಾನ್ಸನ್ ಭಾರತ ವಿರುದ್ಧ ಕೇವಲ 2 ಏಕದಿನ ಪಂದ್ಯವನ್ನಾಡಿದ್ದಾರೆ.







