ಯುಎಇ ವಿರುದ್ದ ಪಂದ್ಯದ ಮುನ್ನಾದಿನ ಪತ್ರಿಕಾಗೋಷ್ಠಿ ರದ್ದುಪಡಿಸಿದ ಪಾಕಿಸ್ತಾನ!

PC : X
ದುಬೈ, ಸೆ.16: ದುಬೈ ಅಂತರ್ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಯುಎಇ ತಂಡದ ವಿರುದ್ಧದ ತನ್ನ ನಿರ್ಣಾಯಕ ಪಂದ್ಯಕ್ಕಿಂತ ಮುನ್ನ ಮಂಗಳವಾರ ನಿಗದಿಯಾಗಿರುವ ಪತ್ರಿಕಾಗೋಷ್ಠಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡ ರದ್ದುಪಡಿಸಿದೆ.
ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ರನ್ನು ಏಶ್ಯಕಪ್ ಅಧಿಕಾರಿಗಳ ಸಮಿತಿಯಿಂದ ತೆಗೆದು ಹಾಕದೇ ಇದ್ದರೆ ಪಂದ್ಯಾವಳಿಯಿಂದ ಹೊರಗುಳಿಯುವುದಾಗಿ ಹೇಳಿಕೆ ನೀಡಿದ ಮರು ದಿನ ಪಾಕಿಸ್ತಾನ ತಂಡ ಈ ಹೆಜ್ಜೆ ಇಟ್ಟಿದೆ.
ದುಬೈನಲ್ಲಿ ರವಿವಾರ ನಡೆದ ತನ್ನ ಪಂದ್ಯದ ನಂತರ ಭಾರತೀಯ ಆಟಗಾರರು ಸಾಂಪ್ರದಾಯಿಕ ಹ್ಯಾಂಡ್ಶೇಕ್ ಮಾಡಿರಲಿಲ್ಲ. ಆ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮ್ಯಾಚ್ ರೆಫರಿ ಪೈಕ್ರಾಫ್ಟ್ ಮೇಲೆ ಮುನಿಸಿಕೊಂಡಿತ್ತು. ಟಾಸ್ ವೇಳೆ ಪೈಕ್ರಾಫ್ಟ್ ಅವರು ಉಭಯ ತಂಡದ ನಾಯಕರಿಗೆ ಹ್ಯಾಂಡ್ ಶೇಕ್ ಮಾಡದಂತೆ ತಿಳಿಸಿದ್ದರು ಎಂದು ಪಿಸಿಬಿ ಆರೋಪಿಸಿದೆ.
Next Story





