ಏಶ್ಯ ಕಪ್ನಿಂದ ಹಿಂದೆ ಸರಿಯುವ ಬೆದರಿಕೆ ಹಾಕಿದ ಪಾಕಿಸ್ತಾನ

Photo credit: PTI
ದುಬೈ: ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ಏಶ್ಯಕ ಪ್ ಟೂರ್ನಿಯ ರೆಫರಿ ಸಮಿತಿಯಿಂದ ತೆಗೆದುಹಾಕದೇ ಇದ್ದರೆ ತಾನು ಟೂರ್ನಿಯ ಉಳಿದ ಪಂದ್ಯಗಳಿಂದ ಹಿಂದೆ ಸರಿಯುವುದಾಗಿ ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
‘‘ನನಗೆ ದೇಶದ ಗೌರವ ಹಾಗೂ ಪ್ರತಿಷ್ಠೆ ಅತ್ಯಂತ ಮುಖ್ಯ. ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿರುವ ಮ್ಯಾಚ್ ರೆಫರಿಯನ್ನು ಏಶ್ಯಕಪ್ ಟೂರ್ನಿಯಿಂದ ತಕ್ಷಣವೇ ತೆಗೆದುಹಾಕಬೇಕೆಂದು ಒತ್ತಾಯಿಸುತ್ತಿದ್ದೇ’’ೆ ಎಂದು ನಖ್ವಿ ಹೇಳಿದ್ದಾರೆ.
‘‘ರವಿವಾರದ ಪಂದ್ಯ ಕ್ರೀಡಾಮನೋಭಾವದ ಕೊರತೆಗೆ ಕಾರಣವಾಗಿದ್ದು ಬೇಸರ ತಂದಿದೆ. ಕ್ರೀಡೆಯೊಳಗೆ ರಾಜಕೀಯ ತರುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ’’ ಎಂದು ನಖ್ವಿ ಹೇಳಿದ್ದಾರೆ.
Next Story





