ಪ್ಯಾರಿಸ್ ಒಲಿಂಪಿಕ್ಸ್ | ಒಂದು ಪಂದ್ಯದ ನಿಷೇಧಕ್ಕೊಳಗಾದ ಅಮಿತ್ ರೋಹಿದಾಸ್
ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯಲಿರುವ ಭಾರತದ ಹಾಕಿ ಪಟು

ಅಮಿತ್ ರೋಹಿದಾಸ್ | PC : X
ಹೊಸದಿಲ್ಲಿ: ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದಿದ್ದ ಭಾರತದ ಪ್ರಮುಖ ರಕ್ಷಣಾ ಆಟಗಾರ ಅಮಿತ್ ರೋಹಿದಾಸ್ ಒಂದು ಪಂದ್ಯದ ನಿಷೇಧಕ್ಕೊಳಗಾಗಿದ್ದು, ಮಂಗಳವಾರ ಜರ್ಮನಿ ವಿರುದ್ಧ ನಡೆಯಲಿರುವ ಸೆಮಿಫೈನಲ್ ಪಂದ್ಯದಿಂದ ವಂಚಿತರಾಗಲಿದ್ದಾರೆ.
ಇದರರ್ಥ, ಪ್ರಮುಖ ಪಂದ್ಯವಾದ ಸೆಮಿಫೈನಲ್ ಗೆ ಕೇವಲ 15 ಆಟಗಾರರು ಮಾತ್ರ ಲಭ್ಯವಾಗಲಿದ್ದು, ಎಂಟು ಬಾರಿಯ ಒಲಿಂಪಿಕ್ ಚಾಂಪಿಯನ್ ಆದ ಭಾರತ ತಂಡಕ್ಕೆ ಇದು ಭಾರಿ ಹಿನ್ನಡೆಯಾಗಿದೆ.
Well Played Our Indian Gems .
— Saurabh kumar (@Saurabhk0096) August 4, 2024
Captain Harmanpreet is still not happy with Red Card to Amit Rohidas
Pray For Him.
HARMANPREET SINGH THE BOSS #Hockey | #Paris2024 pic.twitter.com/NdtWfFCkIe
ರವಿವಾರ ನಡೆದ ಗ್ರೇಟ್ ಬ್ರಿಟನ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯ ಮುಗಿಯಲು ಇನ್ನೂ 40 ನಿಮಿಷ ಬಾಕಿ ಇದ್ದಾಗ, ರೋಹಿದಾಸ್ ಅವರ ಹಾಕಿ ಸ್ಟಿಕ್ ಎದುರಾಳಿ ತಂಡದ ಆಟಗಾರನಿಗೆ ತಗುಲಿದ್ದರಿಂದ, ಅವರನ್ನು ಮೈದಾನದಿಂದ ಹೊರ ಕಳಿಸಲಾಗಿತ್ತು.