ಕ್ರಿಕೆಟ್ಗೆ ಪರ್ವೇಝ್ ರಸೂಲ್ ವಿದಾಯ

ಪರ್ವೇಝ್ ರಸೂಲ್ | Photo Credit ; PTI
ಶ್ರೀನಗರ, ಅ.21: ಭಾರತ ತಂಡವನ್ನು ಪ್ರತಿನಿಧಿಸಿರುವ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್)ಆಡಿರುವ ಜಮ್ಮು-ಕಾಶ್ಮೀರದ ಮೊದಲ ಕ್ರಿಕೆಟಿಗ ಪರ್ವೇಝ್ ರಸೂಲ್ ಪ್ರಥಮ ದರ್ಜೆ ಕ್ರಿಕೆಟ್ನಿಂದ ನಿವೃತ್ತಿ ಪ್ರಕಟಿಸಿದ್ದಾರೆ.
‘‘ಇಂದು ನಾನು ವೃತ್ತಿಪರ ಕ್ರಿಕೆಟ್ನಿಂದ ನಿವೃತ್ತಿಯಾಗುತ್ತಿರುವೆ’’ಎಂದು ಫೇಸ್ಬುಕ್ನಲ್ಲಿ ರಸೂಲ್ ಬರೆದಿದ್ದಾರೆ.
ತನ್ನ ನಿರ್ಧಾರವನ್ನು ಬಿಸಿಸಿಐಗೆ ಶನಿವಾರವೇ ತಿಳಿಸಿದ್ದೇನೆ ಎಂದಿರುವ ದಕ್ಷಿಣ ಕಾಶ್ಮೀರದ 36ರ ವಯಸ್ಸಿನ ಆಲ್ರೌಂಡರ್ ರಸೂಲ್ ತನ್ನ 17 ವರ್ಷಗಳ ದೇಶೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದರು.
‘‘ನಾನು ವೃತ್ತಿಪರ ಕ್ರಿಕೆಟ್ನಿಂದ ದೂರ ಸರಿಯುತ್ತಿದ್ದರೂ, ಯುವಕರಿಗೆ ಮಾರ್ಗದರ್ಶನ ನೀಡುವುದು ಹಾಗೂ ನನ್ನ ಜೀವನವನ್ನು ರೂಪಿಸಿದ ಕ್ರೀಡೆಗೆ ಏನನ್ನಾದರೂ ಮರಳಿಸುವುದು ನನ್ನ ಜೀವನದ ಗುರಿಯಾಗಿದೆ. ಈ ಪ್ರಯಾಣದುದ್ದಕ್ಕೂ ನನಗೆ ಪ್ರೀತಿ, ವಿಶ್ವಾಸ ಹಾಗೂ ನಿರಂತರ ಬೆಂಬಲ ನೀಡಿರುವ ನನ್ನ ಕುಟುಂಬ, ತರಬೇತುದಾರರು, ತಂಡದ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕೃತಜ್ಞನಾಗಿರುತ್ತೇನೆ’’ಎಂದು ರಸೂಲ್ ಹೇಳಿದ್ದಾರೆ.





