IPL 2026 | ಪಂಜಾಬ್ ಕಿಂಗ್ಸ್ ಗೆ ಶ್ರೇಯಸ್ ಅಯ್ಯರ್ ಸಾರಥ್ಯ : ಫರ್ಗ್ಯುಸನ್ ಜಾಗಕ್ಕೆ ಯಾರು?

PC | ANI
ಮುಂಬೈ: ಕಳೆದ ಐಪಿಎಲ್ ಸೀಸನ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ಮತ್ತೆ ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಪಂಜಾಬ್ 2014ರ ಬಳಿಕ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿನಲ್ಲಿ ಸೆಣೆಸಿತ್ತು.
2026ರ ಐಪಿಎಲ್ ಸೀಸನ್ನಲ್ಲಿ ಕೂಡಾ ಪ್ರಮುಖ ಹಳೆಯ ಆಟಗಾರರನ್ನು ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ ನಾಲ್ವರನ್ನು ಖರೀದಿಸಿದೆ. ಆಸ್ಟ್ರೇಲಿಯಾದ ಆಲ್ರೌಂಡರ್ ಬೆನ್ ದ್ವರ್ಶುಯಿಸ್ (ರೂ. 4.4 ಕೊಟಿ), ಕೂಪರ್ ಕೊನಿಲಿ (3 ಕೋಟಿ) ಅವರು ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ಸಾಧ್ಯತೆ ಇದೆ.
ವಿಕೆಟ್ ಕೀಪರ್ ಪ್ರಭ್ಸಿಮ್ರನ್ ಸಿಂಗ್ 2025ರ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಆರಂಭಿಕ ಆಟಗಾರನಾಗಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರು. 17 ಪಂದ್ಯಗಳಲ್ಲಿ 32.29 ಸರಾಸರಿಯಲ್ಲಿ 549 ರನ್ಗಳನ್ನು ಕಲೆ ಹಾಕಿದ್ದಲ್ಲದೇ 160ಕ್ಕೂ ಅಧಿಕ ಸ್ಟ್ರೈಕ್ರೇಟ್ ಹೊಂದಿದ್ದರು. ಈ ಬಾರಿಯೂ ಆರಂಭಿಕ ಆಟಗಾರ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಅವರು ನಿಭಾಯಿಸಲಿದ್ದಾರೆ.
ಕಳೆದ ಬಾರಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಪ್ರಿಯಾಂಶ್ ಆರ್ಯ 17 ಪಂದ್ಯಗಳಲ್ಲಿ 475 ರನ್ ಕಲೆಹಾಕಿದ್ದರು. ಅದ್ಭುತ ಎನಿಸುವ 179.25 ಸ್ಟ್ರೈಕ್ರೇಟ್ ಹೊಂಡಿದ್ದರು. ಚೊಚ್ಚಲ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಖ್ಯಾತಿಗೆ ಪಾತ್ರರಾಗಿದ್ದ ಅವರು ಪ್ರಭ್ಸಿಮ್ರನ್ ಅವರಿಗೆ ಸಾಥ್ ನೀಡಲಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರನ್ನು 26,75 ಕೋಟಿ ರೂಪಾಯಿಗೆ ಖರೀದಿಸಿತ್ತು. ಅದಕ್ಕೆ ತಕ್ಕ ಪ್ರದರ್ಶನ ನೀಡಿದ ಅವರು, 11 ವರ್ಷ ಬಳಿಕ ತಂಡವನ್ನು ಫೈನಲ್ಗೆ ಒಯ್ದಿದ್ದರು. ಸೀಸನ್ನಲ್ಲಿ 600ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರು.
ನೇಹಲ್ ವಡೇರಾ, ಶಶಾಂಕ್ ಸಿಂಗ್,ಮಾಕ್ರ್ಯೂಸ್ ಸ್ಟೋನಿಸ್ ಮಧ್ಯಮಕ್ರಮಾಂಕಕ್ಕೆ ಶಕ್ತಿ ತುಂಬಲಿದ್ದಾರೆ. ವೇಗಿ ಮಾರ್ಕೊ ಜಾನ್ಸನ್, ಅಜ್ಮತ್ತುಲ್ಲಾ ಒಮ್ರಾಜಿ, ಕ್ಸೇವಿಯರ್ ಬಟ್ರ್ಲೆಟ್, ಅರ್ಷದೀಪ್ ಸಿಂಗ್, ಯಜುವೇಂದ್ರ ಚಾಹಲ್ ಹೀಗೆ ಬೌಲಿಂಗ್ ಬತ್ತಳಿಕೆಯಲ್ಲಿ ಹಲವು ಅಸ್ತ್ರಗಳಿವೆ.







