ಮುಂಬೈ ಇಂಡಿಯನ್ಸ್ ನೂತನ ಮುಖ್ಯ ಕೋಚ್ ಆಗಿ ಪೊಲಾರ್ಡ್ ನೇಮಕ

ಕಿರೊನ್ ಪೊಲಾರ್ಡ್ | Photo Credit : PTI
ಮುಂಬೈ, ಅ.24: 2027ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ನೂತನ ಮುಖ್ಯ ಕೋಚ್ ಆಗಿ ಕಿರೊನ್ ಪೊಲಾರ್ಡ್ ಅವರನ್ನು ಶನಿವಾರ ನೇಮಕ ಮಾಡಿದೆ.
ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಲಾರ್ಡ್ ಅವರಿಗೆ ಮುಖ್ಯ ಕೋಚ್ ಹುದ್ದೆಗೆ ಬಡ್ತಿ ನೀಡಲಾಗಿದೆ. ಈ ತಿಂಗಳ ಆರಂಭದಲ್ಲಿ ಮಹೇಲ ಜಯವರ್ಧನೆ ಮುಖ್ಯ ಕೋಚ್ ಹುದ್ದೆ ತೊರೆದ ಬಳಿಕ ಈ ಸ್ಥಾನ ತೆರವಾಗಿತ್ತು. ಜಯವರ್ಧನೆ ಎರಡು ಅವಧಿಗೆ ಮುಂಬೈ ತಂಡದ ಮುಖ್ಯ ಕೋಚ್ ಆಗಿದ್ದರು. 2017ರಿಂದ 2022ರವರೆಗೆ ಮೊದಲ ಅವಧಿಯಲ್ಲಿ ಹಾಗೂ 2024ರಿಂದ 2026ರವರೆಗೆ ಎರಡನೇ ಅವಧಿಯಲ್ಲಿ ಅವರು ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಮುಂಬೈ ತಂಡದ ಮಾಜಿ ಆಟಗಾರ ಪೊಲಾರ್ಡ್, 2010ರ ಐಪಿಎಲ್ಗೂ ಮುನ್ನ ಫ್ರಾಂಚೈಸಿ ಸೇರಿದ್ದರು. 2022ರ ನವೆಂಬರ್ನಲ್ಲಿ ಟೂರ್ನಿಯಿಂದ ನಿವೃತ್ತಿಯಾಗುವವರೆಗೂ ಆಡಿದ್ದರು. ವೆಸ್ಟ್ಇಂಡೀಸ್ನ ಮಾಜಿ ಆಲ್ರೌಂಡರ್ ಪೊಲಾರ್ಡ್ ಮುಂಬೈ ತಂಡದಲ್ಲಿದ್ದಾಗ 2013, 2015, 2017, 2019 ಹಾಗೂ 2020ರಲ್ಲಿ ಪ್ರಶಸ್ತಿ ಗೆದ್ದಿದ್ದರು.
ನಿವೃತ್ತಿಯ ಬಳಿಕ ಪೊಲಾರ್ಡ್ ಮುಂಬೈ ಇಂಡಿಯನ್ಸ್ನ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2023ರ ಆವೃತ್ತಿಯಲ್ಲಿ ಈ ಜವಾಬ್ದಾರಿ ವಹಿಸಿಕೊಂಡಿದ್ದರು.




