ಪ್ರಿಮಿಯರ್ ಲೀಗ್ : ಲಿವರ್ ಪೂಲ್ಗೆ ಜಯ, ಮ್ಯಾಂಚೆಸ್ಟರ್ ಸಿಟಿಗೆ ಮತ್ತೊಂದು ಸೋಲು

PC | ndtv
ಇಂಗ್ಲೆಂಡ್ : ಪ್ರಿಮಿಯರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ಧ ಭಾನುವಾರದ ಪಂದ್ಯದಲ್ಲಿ ಲಿವರ್ ಪೂಲ್ ತಂಡ ಅರ್ಸೆನಲ್ ವಿರುದ್ಧ ರೋಚಕ ಜಯ ಸಾಧಿಸಿದೆ.
83ನೇ ನಿಮಿಷದಲ್ಲಿ ಡೊಮಿನಿಕ್ ಸೊಬೊಸಲ್ಝಿ ಧೀರ್ಘ ಅಂತರದಿಂದ ಹೊಡೆದ ಫ್ರೀ ಕಿಕ್ ಲಿವರ್ ಪೂಲ್ಗೆ ಏಕೈಕ ಗೋಲಿನ ಜಯ ತಂದುಕೊಟ್ಟಿತು. ಲಿವರ್ ಪೂಲ್ನ ಪ್ರಶಸ್ತಿ ಕನಸಿಗೆ ಅರ್ಸೆನಲ್ ಅತಿ ದೊಡ್ಡ ಸವಾಲು ಎನಿಸಿತ್ತು.
"ಉಭಯ ತಂಡಗಳಿಗೆ ಗೆಲ್ಲಲು ಒಂದು ಮಾಂತ್ರಿಕ ಕ್ಷಣ ಬೇಕಾಗಿತ್ತು. ಡೊಮಿನಿಕ್ ಅದನ್ನು ಮಾಡಿದರು" ಎಂದು ಲಿವರ್ ಪೂಲ್ ವ್ಯವಸ್ಥಾಪಕ ಅರ್ನ್ ಸ್ಲಾಟ್ ಹೇಳಿದ್ದಾರೆ.
ಹಲವು ಮಂದಿ ಮ್ಯಾಂಚೆಸ್ಟರ್ ಸಿಟಿ ಈ ಬಾರಿ ಪ್ರಶಸ್ತಿ ಗೆಲ್ಲುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ಬಹುಶಃ ಇದು ಸಾಧ್ಯವಿಲ್ಲ. ಏಕೆಂದರೆ ಬ್ರಿಂಗ್ಟನ್ ವಿರುದ್ಧ 1-2 ಗೋಲುಗಳಿಂದ ಸೋತ ಮ್ಯಾಂಚೆಸ್ಟರ್ ಸಿಟಿಗೆ ಇದು ಸತತ ಎರಡನೇ ಸೋಲು. ಅತ್ಯಂತ ಪ್ರಬಲ ತಂಡ ಎನಿಸಿಕೊಂಡಿದ್ದ ತಂಡಕ್ಕೆ ಸತತ ಎರಡು ಸೋಲುಗಳೊಂದಿಗೆ ಪ್ರಶಸ್ತಿಯ ಆಸೆ ದೂರವಾಗಿದೆ.
"ಇದು ವಾಸ್ತವ- ನಾವು ಧೀರ್ಘ ಅವಧಿಯಿಂದ ಉತ್ತಮ ಫಾರ್ಮ್ನಲ್ಲಿ ಇಲ್ಲ" ಎಂದು ಸಿಟಿ ಮಿಡ್ಫೀಲ್ಡರ್ ರೋಡ್ರಿ ಹೇಳಿದ್ದಾರೆ.





