ಏಕದಿನ ಕಪ್ ಸ್ಪರ್ಧಾವಳಿಯಿಂದ ಹೊರಗುಳಿದ ಪೃಥ್ವಿ ಶಾ

Prithvi Shaw(Twitter)
ಲಂಡನ್ : ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಏಕದಿನ ಕಪ್ ಸ್ಪರ್ಧಾವಳಿಯ ಇನ್ನುಳಿದ ಪಂದ್ಯಗಳಿಂದ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಹೊರಗುಳಿದಿದ್ದಾರೆ.
ತನ್ನ ಕಿರು ಅವಧಿಯಲ್ಲಿ ಪೃಥ್ವಿ ಕೌಂಟಿ ಕ್ಲಬ್ ಮೇಲೆ ಭಾರೀ ಪ್ರಭಾವಬೀರಿದ್ದಾರೆ. ಈ ಸ್ಪರ್ಧಾವಳಿಯ ಇನ್ನುಳಿದ ಪಂದ್ಯಗಳಲ್ಲಿ ಅವರಿಲ್ಲದೆ ಇರುವುದು ಭಾರೀ ಹಿನ್ನಡೆಯಾಗಿದೆ. ಅವರೊಬ್ಬ ವಿನಯವಂತ ಯುವ ಆಟಗಾರನಾಗಿದ್ದು ಅವರು ತುಂಬಾ ಗೌರವಾನ್ವಿತರು. ನಾರ್ಥಾಂಪ್ಟನ್ಶೈರ್ ಅನ್ನು ಪ್ರತಿನಿಧಿಸುವ ಅವಕಾಶಕ್ಕಾಗಿ ಅವರು ತುಂಬಾ ಕೃತಜ್ಞರಾಗಿದ್ದಾರೆ ಎಂದು ನಾರ್ಥಂಪ್ಟನ್ಶೈರ್ ಮುಖ್ಯ ಕೋಚ್ ಜಾನ್ ಸಾಡ್ಲೆಡ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಶಾ ಕಳೆದ ವಾರ 153 ಎಸೆತಗಳಲ್ಲಿ 244 ರನ್ ಗಳಿಸಿ ನಾಥಾಂಪ್ಟನ್ಶೈರ್ ತಂಡ ಸೋಮೆರ್ಸೆಟ್ ವಿರುದ್ಧ 87 ರನ್ನಿಂದ ಜಯ ಸಾಧಿಸಲು ನೆರವಾಗಿದ್ದರು. ಆ ನಂತರ ಅವರು ಡುಹ್ರಾಮ್ ವಿರುದ್ಧ ಶತಕ ಗಳಿಸಿದ್ದರು.
ಭಾರತದ ಆರಂಭಿಕ ಆಟಗಾರನನ್ನು ವೆಸ್ಟ್ಇಂಡೀಸ್ ಹಾಗೂ ಐರ್ಲ್ಯಾಂಡ್ ವಿರುದ್ಧದ ಸೀಮಿತ ಓವರ್ ಸರಣಿಗೆ ಕಡೆಗಣಿಸಲಾಗಿತ್ತು.
23ರ ಹರೆಯದ ಶಾ 2021ರಲ್ಲಿ ಶ್ರೀಲಂಕಾ ಪ್ರವಾಸದ ವೇಳೆ ಭಾರತದ ಪರ ಕೊನೆಯ ಬಾರಿ ಆಡಿದ್ದರು.





