ಒಂದೇ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸಿದ ಪ್ರಿಯಾಂಶ್ ಆರ್ಯ

ಪ್ರಿಯಾಂಶ್ ಆರ್ಯ | PC : X \ @DelhiPLT20
ಹೊಸದಿಲ್ಲಿ : ವೆಸ್ಟ್ಇಂಡೀಸ್ನ ಲೆಜೆಂಡ್ ಸರ್ ಗಾರ್ಫೀಲ್ಡ್ ಸೋಬರ್ಸ್ ಆಗಸ್ಟ್ 31,1968ರಲ್ಲಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡು ಅಭೂತಪೂರ್ವ ಸಾಧನೆ ಮಾಡಿದ್ದರು. ಈ ಮಹತ್ವದ ಸಾಧನೆಯು ಇಂಗ್ಲಿಷ್ ಕೌಂಟಿ ಚಾಂಪಿಯನ್ಶಿಪ್ನ ಪ್ರಥಮ ದರ್ಜೆ ಪಂದ್ಯದಲ್ಲಿ ನಡೆದಿತ್ತು. ಆಗ ಸೋಬರ್ಸ್ ಅವರು ಗ್ಲಾಮೊರ್ಗನ್ ವಿರುದ್ಧ ನಾಟಿಂಗ್ಹ್ಯಾಮ್ಶೈರ್ ತಂಡವನ್ನು ಮುನ್ನಡೆಸಿದ್ದರು.
ಸರಿಯಾಗಿ 56 ವರ್ಷಗಳ ನಂತರ ಆಗಸ್ಟ್ 31, 2024ರಲ್ಲಿ ಇನ್ನೋರ್ವ ಕ್ರಿಕೆಟಿಗ ಕ್ರಿಕೆಟ್ ಇತಿಹಾಸದ ಪುಟದಲ್ಲಿ ತನ್ನ ಹೆಸರು ದಾಖಲಿಸಿದ್ದಾರೆ. ಪ್ರಿಯಾಂಶ್ ಆರ್ಯ ಅವರು ಸೋಬರ್ಸ್ ಅವರ ಅಸಾಮಾನ್ಯ ಸಾಧನೆಯನ್ನು ಪುರಾವರ್ತಿಸಿದರು. ಒಂದೇ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಚಚ್ಚಿದ ಬ್ಯಾಟರ್ಗಳ ವಿಶೇಷ ಕ್ಲಬ್ಗೆ ಸೇರಿಕೊಂಡರು.
ಸೌತ್ ಡೆಲ್ಲಿ ಸೂಪರ್ ಸ್ಟಾರ್ ತಂಡವನ್ನು ಪ್ರತಿನಿಧಿಸಿದ ಪ್ರಿಯಾಂಶ್ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಬ್ಯಾಟಿಂಗ್ ಪರಾಕ್ರಮ ಮೆರೆದರು. ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ನ ಸ್ಪಿನ್ನರ್ ಮನನ್ ಭಾರದ್ವಾಜ್ ವಿರುದ್ಧ ಸಿಕ್ಸರ್ಗಳ ಸುರಿಮಳೆಗೈದರು. ಒಂದೇ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಸಿಡಿಸಿ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸಿದರು.
ಎಡಗೈ ಸ್ಪಿನ್ನರ್ ಭಾರದ್ವಾಜ್ ರನ್ ನಿಯಂತ್ರಿಸಲು ತನ್ನ ಬಲಗೈನಿಂದ ಬೌಲಿಂಗ್ ಮಾಡಲು ಯತ್ನಿಸಿದರು. ಆದರೆ ಅವರ ಪ್ರಯತ್ನ ವ್ಯರ್ಥವಾಗಿದ್ದು, ಸೌತ್ ಡೆಲ್ಲಿ ಬ್ಯಾಟರ್ ತನ್ನ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದರು. ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದ ಪ್ರಿಯಾಂಶ್ ಅವರು ಮನನ್ ಎಸೆದ 12ನೇ ಓವರ್ನಲ್ಲಿ 36 ರನ್ ಗಳಿಸಿದರು. 15ನೇ ಓವರ್ನಲ್ಲಿ ಪಂದ್ಯಾವಳಿಯಲ್ಲಿ ತನ್ನ ಎರಡನೇ ಶತಕ ಪೂರೈಸಿದರು.
6️⃣
— Delhi Premier League T20 (@DelhiPLT20) August 31, 2024
There’s nothing Priyansh Arya can’t do #AdaniDPLT20 #AdaniDelhiPremierLeagueT20 #DilliKiDahaad | @JioCinema @Sports18 pic.twitter.com/lr7YloC58D
ಪ್ರಿಯಾಂಶ್ ಅವರು ದೇಶೀಯ ಟಿ-20 ಪಂದ್ಯದಲ್ಲಿ ಆರು ಸಿಕ್ಸರ್ಗಳನ್ನು ಸಿಡಿಸಿರುವ ರಾಸ್ ವೈಟ್ಲಿ(2017), ಹಝ್ರತುಲ್ಲಾ ಝಝೈ(2018) ಹಾಗೂ ಲಿಯೋ ಕಾರ್ಟರ್(2020)ಅವರಿದ್ದ ಎಲೈಟ್ ಗ್ರೂಪ್ಗೆ ಸೇರ್ಪಡೆಯಾದರು.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಯುವರಾಜ್ ಸಿಂಗ್, ಕಿರೊನ್ ಪೊಲಾರ್ಡ್ ಹಾಗೂ ದೀಪೇಂದ್ರ ಸಿಂಗ್(ಎರಡು ಬಾರಿ)ಈ ಅಪರೂಪದ ಸಾಧನೆ ಮಾಡಿದ್ದಾರೆ.
ಅಂತಿಮವಾಗಿ ಪ್ರಿಯಾಂಶ್ 50 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್ಗಳ ಸಹಿತ 120 ರನ್ ಗಳಿಸಿದರು.
ಮತ್ತೊಂದೆಡೆ ಪ್ರಿಯಾಂಶ್ ಅವರ ಬ್ಯಾಟಿಂಗ್ ಜೊತೆಗಾರ ಆಯುಷ್ ಬದೋನಿ ಸೌತ್ ಡೆಲ್ಲಿ ತಂಡದ ಪರ ಶತಕ ಗಳಿಸಿದರು. ಬದೋನಿ 300ರ ಸ್ಟ್ರೈಕ್ರೇಟ್ನಲ್ಲಿ 8 ಬೌಂಡರಿ, 10 ಸಿಕ್ಸರ್ಗಳ ಸಹಿತ 55 ಎಸೆತಗಳಲ್ಲಿ 165 ರನ್ ಗಳಿಸಿದ್ದಾರೆ.
ಈ ಇಬ್ಬರ ಪ್ರಯತ್ನದ ಫಲವಾಗಿ ಸೌತ್ ಡೆಲ್ಲಿ ತಂಡವು 5 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು. ಟಿ-20 ಕ್ರಿಕೆಟ್ನಲ್ಲಿ ತಂಡವೊಂದು ಎರಡನೇ ಬಾರಿ 300 ಪ್ಲಸ್ ಸ್ಕೋರ್ ಗಳಿಸಿದೆ. 2023ರ ಏಶ್ಯನ್ ಗೇಮ್ಸ್ನಲ್ಲಿ ಮಂಗೋಲಿಯ ವಿರುದ್ಧ ನೇಪಾಳ ತಂಡ 3 ವಿಕೆಟ್ಗೆ 314 ರನ್ ಗಳಿಸಿದ್ದು, ಇದು ಟಿ20 ಇತಿಹಾಸದಲ್ಲಿ ಗರಿಷ್ಠ ಮೊತ್ತವಾಗಿದೆ.
ಪ್ರಿಯಾಂಶ್ ಹಾಗೂ ಬದೋನಿ 103 ಎಸೆತಗಳಲ್ಲಿ 286 ರನ್ ಕಲೆ ಹಾಕಿದರು. ಇದು ಟಿ20 ಕ್ರಿಕೆಟ್ನ ಯಾವುದೇ ವಿಕೆಟ್ನಲ್ಲಿ ದಾಖಲಾದ ಗರಿಷ್ಠ ರನ್ ಜೊತೆಯಾಟವಾಗಿದೆ.







