ಪ್ರೊ ಕಬಡ್ಡಿ ಲೀಗ್ : ಯು ಮುಂಬಾ, ಬೆಂಗಳೂರು ಬುಲ್ಸ್ ಗೆ ರೋಮಾಂಚಕ ಜಯ

ಹೊಸದಿಲ್ಲಿ : ಯು ಮುಂಬಾ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ರವಿವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ರೋಮಾಂಚಕ ಗೆಲುವು ದಾಖಲಿಸಿವೆ.
ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಯು ಮುಂಬಾ ತಂಡ ಬಂಗಾಳ ವಾರಿಯರ್ಸ್ ತಂಡವನ್ನು 39-37 ಅಂಕಗಳ ಅಂತರದಿಂದ ಮಣಿಸಿತು.
ಯು ಮುಂಬಾ ಪರ ಅಮಿರ್ಮುಹಮ್ಮದ್ 8 ಅಂಕ, ಗುಮಾನ್ ಸಿಂಗ್ 6 ಅಂಕ ಗಳಿಸಿದರು.
2 ಅಂಕದಿಂದ ಸೋಲುಂಡಿರುವ ಬಂಗಾಳದ ಪರ ಮಣಿಂದರ್ ಸಿಂಗ್ 11 ಅಂಕ ಗಳಿಸಿದರು.
► ಟೈಟಾನ್ಸ್ಗೆ ತಿವಿದ ಬೆಂಗಳೂರು ಬುಲ್ಸ್:
ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು 33-31 ಅಂಕದಿಂದ ಮಣಿಸಿದೆ.
ಬೆಂಗಳೂರು ಪರ ಸುರ್ಜೀತ್ ಸಿಂಗ್ 7 ಅಂಕ, ಭರತ್ ಆರಂಕ ಗಳಿಸಿದರು. ಟೈಟಾನ್ಸ್ ಪರ ಪವನ್ ಸೆಹ್ರಾವತ್ ಅತ್ಯಧಿಕ ಸ್ಕೋರ್(13) ಗಳಿಸಿದರು.
Next Story





